ಬೆಂಗಳೂರು: ಜಮೀನಿಗಾಗಿ ಜಗಳ ಜೋಡಿ ಕೊಲೆಯಲ್ಲಿ ಅಂತ್ಯ!

ಜಮೀನಿಗಾಗಿ ನಡೆದ ಜಗಳ ತಾರಕಕ್ಕೇರಿ ಅಪ್ಪ-ಮಗನ ಜೋಡಿ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.

Published: 05th February 2019 12:00 PM  |   Last Updated: 05th February 2019 11:35 AM   |  A+A-


Fight for the land ends with double murder in Bengaluru

ಬೆಂಗಳೂರು: ಜಮೀನಿಗಾಗಿ ಜಗಳ ಜೋಡಿ ಕೊಲೆಯಲ್ಲಿ ಅಂತ್ಯ!

Posted By : RHN RHN
Source : Online Desk
ಬೆಂಗಳೂರು: ಜಮೀನಿಗಾಗಿ ನಡೆದ ಜಗಳ ತಾರಕಕ್ಕೇರಿ ಅಪ್ಪ-ಮಗನ ಜೋಡಿ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆಯ ಮುತ್ತಕದಹಳ್ಳಿಯಲ್ಲಿ ನಡೆದ ಕೃತ್ಯದಲ್ಲಿ ನಾರಾಯಣರೆಡ್ಡಿ (60) ಮತ್ತು ಇವರ ಪುತ್ರ ಲಿಂಗಾರೆಡ್ಡಿ (33) ಹತ್ಯೆಯಾಗಿದ್ದಾರೆ. ಮುತ್ತುಕದಹಳ್ಳಿಯ ಬಾಬು (35) ಎಂಬಾತನೇ ಆರೋಪಿಯಾಗಿದ್ದು ಹತ್ಯೆ ನಡೆಸಿದ ಬಳಿಕ ಆರೋಪಿ ತಾನೇ ಪೋಲೀಸರಿಗೆ ಶರಣಾಗಿದ್ದಾನೆ.

ಘಟನೆ ವಿವರ

ಮುತ್ತಕದಹಳ್ಳಿಯಲ್ಲಿ ನಾರಾಯಣರೆಡ್ಡಿ ತಮ್ಮ ಜಮೀನನ್ನು ಆರೋಪಿ ಬಾಬುವಿಗೆ ನೀಡಿದ್ದರು. ಆದರೆ ಜಮೀನು ನೀಡುವ ಕುರಿತು ಮಾತಿನ ಒಡಂಬಡಿಕೆ ವಿನಾ ನೊಂದಣಿ ಆಗಿರಲಿಲ್ಲ. ಈ ವಿಚಾರ ಅವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹಲವು ವೇಳೆ ಮಧ್ಯಸ್ಥದಾರರ ಸಂಧಾನದಿಂದ ಜಗಳ ಪರಿಹಾರ ಕಂಡಿತ್ತು.
ಆದರೆ ಸೋಮವಾರ ನಾರಾಯಣರೆಡ್ಡಿ ಹಾಗೂ ಅವರ ಪುತ್ರ ಲಿಂಗಾರೆಡ್ಡಿ ನೀಲಗಿರಿ ತೋಪಿನ ಬಳಿ ಕೆಲಸ ಮಾಡುತ್ತಿದ್ದಾಗ ಬಾಬು ಅಲ್ಲಿಗೆ ಆಗಮಿಸಿ ಮತ್ತೆ ವಾಗ್ವಾದಕ್ಕಿಳಿದಿದ್ದಾನೆ. ಆವೇಳೆ ಮಾತು ವಿಕೋಪಕ್ಕೆ ಹೋಗಿ ಎರಡೂ ಕಡೆಯವರು ಕೈ ಮಿಲಾಯಿಸಿದ್ದಾರೆ. ಈ ವೇಳೆ ಮಚ್ಚು ಹಿಡಿದೇ ಆಗಮಿಸಿದ್ದ ಆರೋಪಿ ಬಾಬು ಮೊದಲು ನಾರಾಯಣರೆಡ್ಡಿ ಆ ನಂತರ ಲಿಂಗಾರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದಾನೆ.

ಆರೋಪಿ ಕೊಲೆ ಬಳಿಕ ತಾನೇ ನೇರವಾಗಿ ಪೋಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನೆ ವಿವರ ಪಡೆದ ಸ್ಥಳ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Stay up to date on all the latest ರಾಜ್ಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp