ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಸ್ಲಮ್ ಭರತ್ ಅರೆಸ್ಟ್!

ಕುಖ್ಯಾತ ರೌಡಿ ಶೀಟರ್ ಸ್ಲಮ್ ಭರತ್ ನನ್ನು ಪೋಲೀಸರು ಬಂಧಿಸಿದ್ದಾರೆ. ಕೆಂಗೇರಿ ವ್ಯಾಪ್ತಿಯಲ್ಲಿ ಭರತ್ ಇದ್ದ ಮಾಹಿತಿ ಪಡೆದ ಸಿಸಿಬಿ ಅವನ ಬಂಧನಕ್ಕಾಗಿ ತೆರಳಿದಾಗ ಪೇದೆ ಹನುಮೇಶ್....

Published: 05th February 2019 12:00 PM  |   Last Updated: 05th February 2019 10:31 AM   |  A+A-


Slum Bharath

ಸ್ಲಮ್ ಭರತ್

Posted By : RHN RHN
Source : Online Desk
ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಸ್ಲಮ್ ಭರತ್ ನನ್ನು ಪೋಲೀಸರು ಬಂಧಿಸಿದ್ದಾರೆ. ಕೆಂಗೇರಿ ವ್ಯಾಪ್ತಿಯಲ್ಲಿ  ಭರತ್ ಇದ್ದ ಮಾಹಿತಿ ಪಡೆದ ಸಿಸಿಬಿ  ಅವನ ಬಂಧನಕ್ಕಾಗಿ ತೆರಳಿದಾಗ ಪೇದೆ ಹನುಮೇಶ್ ಎನ್ನುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಭರತ್ ಮೇಲೆ ಪೋಲೀಸರು ಫೈರಿಂಗ್ ನಡೆಸಿದರು. ಬಳಿಕ ಆತನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ನಾಲ್ಕು ಕೊಲೆ, ದರೋಡೆ ಸೇರಿ ಅರವತ್ತಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಭರತ್ ಪೋಲೀಸರಿಗೆ ಬೇಕಾದವನಾಗಿದ್ದ.

ಮಂಗಳವಾರ ಸಂಜೆ ರೌಡಿ ಶೀಟರ್ ಬಂಧನದ ವೇಳೆ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಪಿಎಸ್‍ಐ ಪ್ರವೀಣ್ ಅವನ ಮೇಲೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ವೇಳೆ ಗಾಯಗೊಂಡ ಪೋಲೀಸ್ ಸಿಬ್ಬಂದಿ ಹನುಮೇಶ್ ಗೆ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ.
Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp