ಇಡಿ, ಐ.ಟಿ ಇಲಾಖೆ ವಿರುದ್ಧ ಹೈಕೋರ್ಟ್ ಮೊರೆ ಹೋದ ಸಚಿವ ಡಿ ಕೆ ಶಿವಕುಮಾರ್

ಖುದ್ದಾಗಿ ಮುಂದಿನ ಎಲ್ಲಾ ವಿಚಾರಣೆಗೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ ಹೊರಡಿಸಿದ...
ಸಚಿವ ಡಿ ಕೆ ಶಿವಕುಮಾರ್
ಸಚಿವ ಡಿ ಕೆ ಶಿವಕುಮಾರ್

ಬೆಂಗಳೂರು; ಖುದ್ದಾಗಿ ಮುಂದಿನ ಎಲ್ಲಾ ವಿಚಾರಣೆಗೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ ಹೊರಡಿಸಿದ ಸಮ್ಮನ್ಸ್ ನ್ನು ಪ್ರಶ್ನಿಸಿ ಜಲ ಸಂಪನ್ಮೂಲ ಖಾತೆ ಸಚಿವ ಡಿ ಕೆ ಶಿವಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಸಮ್ಮನ್ಸ್ ನಲ್ಲಿ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಸೌರಭ್ ಮೆಹ್ತಾ, ಅಕ್ರಮ ಹಣ ವರ್ಗಾವಣೆ ಕಾಯ್ದೆ 2002ರಡಿಯಲ್ಲಿ ತನಿಖೆ ನಡೆಸಲಾಗುತ್ತಿದ್ದು ಈ ಸಂಬಂಧ ವಿಚಾರಣೆಗೆ ಶಿವಕುಮಾರ್ ಅವರ ಹಾಜರಾತಿ ಕಡ್ಡಾಯವಾಗಿರುತ್ತದೆ ಎಂದು ಹೇಳಿದ್ದಾರೆ.

ಇದೇ 8ರಂದು ಜಾರಿ ನಿರ್ದೇಶನಾಯದ ಮುಂದೆ ವಿಚಾರಣೆಗೆ ಹಾಜರಾಗಬೇಕೆಂದು ಶಿವಕುಮಾರ್ ಅವರಿಗೆ ಸೂಚಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಆರಂಭಿಸಿರುವ ವಿಚಾರಣೆ ಮತ್ತು ಆರ್ಥಿಕ ಅಪರಾಧಗಳಿಗೆ ವಿಶೇಷ ನ್ಯಾಯಾಲಯ ತೆಗೆದುಕೊಂಡ ಎಚ್ಚರಿಕೆಯನ್ನು ಸಚಿವ ಡಿಕೆಶಿ ಪ್ರಶ್ನಿಸಿದ್ದಾರೆ. ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿಸದೆ, ಆದಾಯ ತೆರಿಗೆ ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡಿದ್ದು ಹಾಗೂ ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಸಚಿವ ಡಿಕೆಶಿ ಎದುರಿಸುತ್ತಿದ್ದಾರೆ.

ಐಪಿಸಿ ಸೆಕ್ಷನ್ ನ ಸೆಕ್ಷನ್ 120ಬಿಯಡಿ ಶಿವಕುಮಾರ್ ಅವರು ಅಪರಾಧವೆಸಗಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಕಳೆದ ತಿಂಗಳು 17ರಂದು ಸಮ್ಮನ್ಸ್ ಹೊರಡಿಸಿದ್ದರು. ಇದಕ್ಕೆ ಶಿವಕುಮಾರ್, ಜಾರಿ ನಿರ್ದೇಶನಾಲಯದ ಇಡೀ ವಿಚಾರಣೆಗಳು ನ್ಯಾಯವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ.

ಐಟಿ ಇಲಾಖೆಯ ಕಲಾಪಗಳಿಗೆ ಸಂಬಂಧಪಟ್ಟಂತೆ ಕಳೆದ ವರ್ಷ ಮೇ 28ರಂದು ನೀಡಿದ್ದ ಅನುಮತಿ ಆದೇಶವನ್ನು ರದ್ದುಪಡಿಸಬೇಕೆಂದು ಶಿವಕುಮಾರ್ ಒತ್ತಾಯಿಸಿದ್ದಾರೆ.

ಕೇಸಿನ ಹಿನ್ನಲೆ;
2017ರ ಆಗಸ್ಟ್ 2ರಂದು ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಸೇರಿದ ಆಸ್ತಿ-ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ದಾಳಿಯ ಸಂದರ್ಭದಲ್ಲಿ ಸಿಕ್ಕಿದ ದಾಖಲೆಗಳು ಮತ್ತು ಮುಂದಿನ ತನಿಖೆಗಳ ಆಧಾರದ ಮೇಲೆ ಶಿವಕುಮಾರ್ ಮೇಲೆ ಐ ಟಿ ಕಾಯ್ದೆ ಸೆಕ್ಷನ್ 276ಸಿ(1), 277ರಡಿ ಮತ್ತು ಐಪಿಸಿ ಸೆಕ್ಷನ್ 120-ಬಿಯಡಿ ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಸು ದಾಖಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com