ಮಹಿಳೆ ಮೇಲೆ ರೌಡಿ ಶೀಟರ್ ಯಶಸ್ವಿನಿಯಿಂದ ಹಲ್ಲೆ: ದೂರು ದಾಖಲು, ಲೇಡಿ ಡಾನ್ ನಾಪತ್ತೆ!

ರೌಡಿ ಶೀಟರ್ ಯಶಸ್ವಿನಿ ಗೌಡ ಅಲಿಯಾಸ್ ಮುನಿಯಮ್ಮ 44 ವರ್ಷದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾಳೆ...

Published: 08th February 2019 12:00 PM  |   Last Updated: 08th February 2019 12:09 PM   |  A+A-


Yashaswini Gowda,

ಯಶಸ್ವಿನಿ ಗೌಡ

Posted By : SD SD
Source : The New Indian Express
ಬೆಂಗಳೂರು: ರೌಡಿ ಶೀಟರ್ ಯಶಸ್ವಿನಿ ಗೌಡ ಅಲಿಯಾಸ್ ಮುನಿಯಮ್ಮ 44 ವರ್ಷದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾಳೆ.

ಗಂಗಮ್ಮನಗುಡಿಯಲ್ಲಿ ನಿವಾಸಿ ಲಲಿತಾ ರಮೇಶ್ ಎಂಬುವರನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಕೆ,ಸಿ ಜವರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ನಂತರ ಯಶಸ್ವಿನಿ ವಿರುದ್ಧ ಕೇಸು ದಾಖಲಿಸಿದ್ದಾರೆ, ನಂತರ ಲಲಿತಾ ಅವರಿಗೆ ಕರೆ ಮಾಡಿದ ಯಶಸ್ವಿನಿ ದೂರು ವಾಪಸ್ ತೆಗೆದುಕೊಳ್ಳುವಂತೆ  ಬೆದರಿಕೆ ಹಾಕಿದ್ದಾಳೆ. 

ರಾಜಾಜಿನಗರ ನಿವಾಸಿ ಲಲಿತಾ ಈ ಹಿಂದೆ ಗೋವಿಂದರಾಜ್ ಎಂಬುವರ ವಿರುದ್ಧ ದೂರು ದಾಖಲಿಸಿದ್ದರು, ಹಣಕಾಸಿನ ವಿಚಾರವಾಗಿ ಗೋವಿಂದ್ ರಾಜ್ ಮತ್ತು ಲಲಿತಾ ನಡುವೆ ಜಗಳ ನಡೆದಿತ್ತು, ಹಣ ವಾಪಸ್ ನೀಡುವಂತೆ ಲಲಿತಾ ಮೇಲೆ ಗೋವಿಂದರಾಜ್ ಹಲ್ಲೆ ನಡೆಸಿದ್ದ,. ಈ ಸಂಬಂಧ ಲಲಿತಾ ಗೋವಿಂದರಾಜ್ ವಿರುದ್ದ ದೂರು ದಾಖಲಿಸಿದ್ದರು.

ಇತ್ತೀಚೆಗೆ ಯಶಸ್ವಿನಿ ಭೇಟಿ ಮಾಡಿದ ಗೋವಿಂದರಾಜ್ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಲಲಿತಾ ಮೇಲೆ ಒತ್ತಡ ಹೇರುವಂತೆ, ಬೆದರಿಕೆ ಹಾಕುವಂತೆ ಯಶಸ್ವಿನಿಗೆ ಹೇಳಿದ್ದ, ಅದರಂತೆ ಯಶಸ್ವಿನಿ ಆಕೆಗೆ ಬೆದರಿಕೆ ಒಡ್ಡಿದ್ದಳು,  ಆದರೆ ಕೇಸ್ ವಾಪಸ್ ತೆಗೆದುಕೊಳ್ಳಲು ಲಲಿತಾ ನಿರಾಕರಿಸಿದ್ದರು

ಫೆಬ್ರವರಿ 11 ರಂದು ನ್ಯಾಯಾಲಯದಲ್ಲಿ ಪ್ರಕರಣವಿದ್ದು ವಿಚಾರಣೆಗೆ ಹಾಜರಾಗಬಾರದು ಎಂದು ಹಲ್ಲೆ ಮಾಡಿದ್ದಾರೆ.

ರೌಡಿ ಯಶಸ್ವಿನಿ ಮತ್ತು 5 ಜನ ಮಹಿಳೆಯರು ಸೇರಿ ಹಲ್ಲೆ ನಡೆಸಿದ್ದಾರೆ.  ಕೇಸ್ ಒಂದರಲ್ಲಿ ಸಾಕ್ಷಿ ಹೇಳದಂತೆ ಹಲ್ಲೆ ಮಾಡಿದ್ದಾರೆ ಎಂದು  ಹಲ್ಲೆಗೊಳಗಾದ ಲಲಿತಾ ಮಾಹಿತಿ ನೀಡಿದ್ದಾರೆ.  ದೂರಿನ ಆಧಾರದ ಮೇಲೆ  ಪೊಲೀಸರು ಯಶಸ್ವಿನಿ ಬಂಧಿಸಲು ಶೋಧ ನಡೆಸಿದ್ದಾರೆ, ಆದರೆ ಆಕೆ ನಾಪತ್ತೆಯಾಗಿದ್ದಾಳೆ. 
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp