ಮೂರು ತಿಂಗಳಿನಿಂದ ಕೊಠಡಿಯಲ್ಲಿ ಬಂಧಿಯಾಗಿರುವ ವೃದ್ಧೆ; ವೈರಲ್ ಆದ ವಿಡಿಯೊ

ಇಲ್ಲಿನ ಕಾಡುಬೀಸನಹಳ್ಳಿಯಲ್ಲಿ ಪುತ್ರ ಮತ್ತು ಸೊಸೆಯಿಂದ 68 ವರ್ಷದ ವಯೋವೃದ್ಧೆ ಸಣ್ಣ ಕೊಠಡಿಯಲ್ಲಿ ಕಳೆದ...
ಕೊಠಡಿಯಲ್ಲಿರುವ ವೃದ್ಧೆ ಮುನಿಯಮ್ಮ
ಕೊಠಡಿಯಲ್ಲಿರುವ ವೃದ್ಧೆ ಮುನಿಯಮ್ಮ

ಬೆಂಗಳೂರು: ಇಲ್ಲಿನ ಕಾಡುಬೀಸನಹಳ್ಳಿಯಲ್ಲಿ ಪುತ್ರ ಮತ್ತು ಸೊಸೆಯಿಂದ 68 ವರ್ಷದ ವಯೋವೃದ್ಧೆ ಸಣ್ಣ ಕೊಠಡಿಯಲ್ಲಿ ಕಳೆದ ಮೂರು ತಿಂಗಳಿನಿಂದ ಕೂಡಿ ಹಾಕಿರುವ ಫೋಟೋ ವೈರಲ್ ಆಗಿದೆ. ಸ್ಥಳೀಯರು ವೃದ್ಧೆ ಮುನಿಯಮ್ಮಳ ವಿಡಿಯೊ ಮಾಡಿ ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನ ಸುದ್ದಿ ವಾಹಿನಿಗಳಿಗೆ ಕಳುಹಿಸಿದ್ದಾರೆ.

ವಿಡಿಯೊ ನಿನ್ನೆ ವೈರಲ್ ಆಗಿದೆ. ತನ್ನ ಮಗ ವೆಂಕಟಸ್ವಾಮಿ ಆಸ್ತಿಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ್ದು ಸೊಸೆ ಕೊಠಡಿಯೊಳಗೆ ಕೂಡಿ ಹಾಕಿದ್ದಾಳೆ ಎಂದು ಮುನಿಯಮ್ಮ ಆರೋಪಿಸಿದ್ದಾರೆ. ವೆಂಕಟಸ್ವಾಮಿ ಮತ್ತು ಆತನ ಪತ್ನಿ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದು ಮುನಿಯಮ್ಮನನ್ನು ಸರಿಯಾದ ಗಾಳಿ ಬೆಳಕು ಬಾರದ ಮನೆಯಲ್ಲಿ ಕೂಡಿ ಹಾಕಿದ್ದಾರೆ.

ಈ ಬಗ್ಗೆ ಪುತ್ರ ವೆಂಕಟಸ್ವಾಮಿಯನ್ನು ಕೇಳಿದರೆ. ನನ್ನ ತಾಯಿಗೆ ಆರೋಗ್ಯವಿಲ್ಲ. ಮನೆಯಿಂದ ಹೊರಹೋಗಿ ರಸ್ತೆ ಮಧ್ಯೆ ಓಡಾಡುತ್ತಾರೆ. ಹೀಗಾಗಿ ಅವರನ್ನು ಕೊಠಡಿಯೊಳಗೆ ಕೂಡಿ ಹಾಕಿ ನಾವು ಕೆಲಸಕ್ಕೆ ಹೋಗುತ್ತೇವೆ ಎಂದರು. ಪೊಲೀಸರು ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com