ಸಿದ್ದರಾಮಯ್ಯನವರನ್ನು ಸೋಲಿಸಿದ್ದಕ್ಕೇ ಕೊಡಗಿನಲ್ಲಿ ಜಲಪ್ರಳಯ: ನಿರಂಜನಾನಂದಪುರಿ ಸ್ವಾಮೀಜಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಿದ್ದರ ಪರಿಣಾಮ ಕೊಡಗಿನಲ್ಲಿ ಜಲಪ್ರಳಯವಾಗಿದೆ ಎಂದು ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಹೇಳಿದ್ದಾರೆ.

Published: 09th February 2019 12:00 PM  |   Last Updated: 09th February 2019 04:29 AM   |  A+A-


Siddaramaiah-Niranjanananda Puri Swamiji

ಸಿದ್ದರಾಮಯ್ಯ-ನಿರಂಜನಾನಂದಪುರಿ ಸ್ವಾಮೀಜಿ

Posted By : VS VS
Source : Online Desk
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಿದ್ದರ ಪರಿಣಾಮ ಕೊಡಗಿನಲ್ಲಿ ಜಲಪ್ರಳಯವಾಗಿದೆ ಎಂದು ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಹೇಳಿದ್ದಾರೆ. 

ಮೈಸೂರಿನಲ್ಲಿ ಕನಕ ಭವನ ಉದ್ಘಾಟನೆ ವೇಳೆ ಮಾತನಾಡಿದ ಅವರು, ಹಾಲುಮತ ಸಮಾಜದ ನಾಯಕರು ಸಮಾಜದ ಅಭಿವೃದ್ಧಿ, ಏಳಿಗೆಗಾಗಿ ದುಡಿದರು. ಅವರಿಗೆ ಅನ್ಯಾಯವಾದ ಸಂದರ್ಭದಲ್ಲಿ ಪ್ರಕೃತಿ ಮುನಿಸಿಕೊಂಡು ತನ್ನ ಆರ್ಭಟ ಪ್ರದರ್ಶಿಸಿತ್ತು ಎಂದರು.

ಈ ವಿಷಯವನ್ನು ಅಂದೆ ನಾನು ಹೇಳಬೇಕೆಂದುಕೊಂಡಿದ್ದೆ ಆದರೆ ಆಗ ನನಗೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಇಂದು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಹೀಗಾಗಿ ಸಿದ್ದರಾಮಯ್ಯ ಸೇರಿ ನಮ್ಮ ಸಮಾಜದ ಯಾವುದೇ ನಾಯಕರ ಬಗ್ಗೆ ಹೀನಾಯವಾಗಿ ಮಾತನಾಡಬಾರದು ಎಂದು ಸ್ವಾಮೀಜಿಗಳು ಸಿದ್ದರಾಮಯ್ಯ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp