ಬೆಂಗಳೂರು: ಅನ್ನ, ನೀರು ನೀಡದೆ ವರದಕ್ಷಿಣೆ ಕಿರುಕುಳ,ದೂರು ದಾಖಲು

ಪೋಷಕರಿಂದ ವರದಕ್ಷಿಣೆ ತರುವಂತೆ ಅನ್ನ, ನೀರು ಕೊಡದೆ ಮನೆಯಿಂದ ಹೊರಗೆ ಅಟ್ಟಿ ಕಿರುಕುಳ ನೀಡುತ್ತಿರುವ ಪತಿ ಹಾಗೂ ಅವರ ಸಂಬಂಧಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಪೋಷಕರಿಂದ ವರದಕ್ಷಿಣೆ ತರುವಂತೆ ಅನ್ನ, ನೀರು ಕೊಡದೆ ಮನೆಯಿಂದ ಹೊರಗೆ ಅಟ್ಟಿ ಕಿರುಕುಳ ನೀಡುತ್ತಿರುವ  ಪತಿ ಹಾಗೂ ಅವರ ಸಂಬಂಧಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ.

ನವೆಂಬರ್ 2016ರಲ್ಲಿ 52 ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆ ನೀಡಿ 8 ಲಕ್ಷ ವೆಚ್ಚ ಮಾಡಿ ಮದುವೆ ಆಗಿರುವುದಾಗಿ 23 ವರ್ಷದ  ರಮ್ಯಾ ( ಹೆಸರು ಬದಲಾಯಿಸಲಾಗಿದೆ )  ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಪೋಷಕರಿಂದ 1 ಲಕ್ಷ ರೂ. ತಂದುಕೊಡಲಾಗಿದೆ. ಇನ್ನೂ ಹೆಚ್ಚಿನ ಹಣ ತರುವಂತೆ ತನ್ನ ಪತಿ ಹಾಗೂ ಅವರ ಸಂಬಂಧಿಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆ ಹೇಳಿದ್ದಾಳೆ.

ಆಟೋ ಚಾಲಕನಾಗಿರುವ  ಪತಿ  ಹೊಡೆಯುವುದಲ್ಲದೇ, ಆಗಾಗ್ಗೆ ನಿಂದಿಸುತ್ತಾರೆ. ಮೂರು ತಿಂಗಳಿಗೊಮ್ಮೆ ಪೋಷಕರ ಮನೆಗೆ ಕಳುಹಿಸಿ ಹಣ ತರುವಂತೆ ಪೀಡಿಸುತ್ತಾರೆ. ತಾನೂ ದುಡಿದೆಲ್ಲವನ್ನೂ ಅವರಿಗೆ ನೀಡಿದ್ದರೂ ಅದು ಸಾಕಾಗುವುದಿಲ್ಲ ಎನ್ನುತ್ತಿದ್ದು, ತವರು ಮನೆಯಲ್ಲಿಯೇ ಊಟ ಮಾಡಿ, ಅಲ್ಲಿಯೇ  ಸ್ನಾನ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ ಆರು ತಿಂಗಳಿನಿಂದ ಊಟ ನೀಡುತ್ತಿಲ್ಲ, ಎರಡೂ ವಾರಗಳಿಂದ ಸ್ನಾನ ಮಾಡುವುದಕ್ಕೂ ಬಿಡುತ್ತಿಲ್ಲ, ವಾಟರ್ ಹೀಟರ್ ಸ್ವೀಚ್ ಆಪ್ ಮಾಡುತ್ತಿದ್ದಾರೆ. ಮನೆಯಿಂದ ಹೊರಗಡೆ ಹೋದಾಗ ಕೊಠಡಿಯೊಳಗೆ ಕೂಡಿ ಹೊರಗೆ ಬೀಗ ಹಾಕಿ ಹೋಗುತ್ತಿದ್ದಾರೆ. ಎಂದು ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯ ಪತಿ ಹಾಗೂ ಸಂಬಂಧಿಕರನ್ನು ಕರೆದು ಕಿರುಕುಳ ನೀಡದಂತೆ ಎಚ್ಚರಿಕೆ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com