ನೀಲಿ ಚಿತ್ರ ತೋರಿಸಿ 'ಅದರಂತೆ ಮಾಡು' ಎನ್ನುತ್ತಿದ್ದ ಕಾಮುಕ ಗಂಡನ ವಿರುದ್ಧ ಪತ್ನಿಯಿಂದಲೇ ದೂರು!

ನೀಲಿ ಚಿತ್ರಗಳಿಗೆ ದಾಸನಾಗಿರುವ ಕಾಮುಕ ಗಂಡನೋರ್ವ ತನ್ನ ಪತ್ನಿಯನ್ನೂ ಅಶ್ಲೀಲ ವಿಡಿಯೋದಲ್ಲಿರುವಂತೆ ನಡೆದುಕೊ ಎಂದು ಪೀಡಿಸುತ್ತಿದ್ದ ಆರೋಪದ ಮೇಲೆ ಹೆಂಡತಿ ಪೊಲೀಸ್ ದೂರು ದಾಖಲಿಸಿದ್ದಾಳೆ.

Published: 10th February 2019 12:00 PM  |   Last Updated: 10th February 2019 09:43 AM   |  A+A-


Bengaluru: Porn-addicted man accuses wife of acting in clip, tortures her Police Complaint Filed

ಸಾಂದರ್ಭಿಕ ಚಿತ್ರ

Posted By : SVN SVN
Source : Online Desk
ಬೆಂಗಳೂರು: ನೀಲಿ ಚಿತ್ರಗಳಿಗೆ ದಾಸನಾಗಿರುವ ಕಾಮುಕ ಗಂಡನೋರ್ವ ತನ್ನ ಪತ್ನಿಯನ್ನೂ ಅಶ್ಲೀಲ ವಿಡಿಯೋದಲ್ಲಿರುವಂತೆ ನಡೆದುಕೊ ಎಂದು ಪೀಡಿಸುತ್ತಿದ್ದ ಆರೋಪದ ಮೇಲೆ ಹೆಂಡತಿ ಪೊಲೀಸ್ ದೂರು ದಾಖಲಿಸಿದ್ದಾಳೆ.

ವರದಕ್ಷಿಣೆಗಾಗಿ ಪೀಡಿಸುವುದು, ನಿತ್ಯ ಹೆಂಡತಿಗೆ ಹೊಡೆಯುವುದು ಮತ್ತಿತ್ಯಾದಿ ವಿಚಾರಗಳಲ್ಲಿ ಹೆಂಗಸರು ಪೊಲೀಸ್​ ಠಾಣೆಯ ಮೆಟ್ಟಿಲೇರುವುದು ಸಾಮಾನ್ಯ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಚ್ಚರಿಯ ಪ್ರಕರಣವೊಂದು ವರದಿಯಾಗಿದ್ದು, ನೀಲಿ ಚಿತ್ರ ನೋಡಿ ಅದರಂತೆ ನಡೆದುಕೋ ಎಂದು ಪೀಡಿಸುತ್ತಿದ್ದ ಗಂಡನ ವಿರುದ್ಧ ಹೆಂಡತಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ.

ನೆಲಮಂಗಲದ ವಿಜಯ ನಗರ ಬಡಾವಣೆ ನಿವಾಸಿ ವಸಂತ್ ಎಂಬಾತನ ವಿರುದ್ಧ ಆತನ ಪತ್ನಿ ದೂರು ದಾಖಲಿಸಿದ್ದಾಳೆ. ಪೊಲೀಸ್ ಮೂಲಗಳ ಪ್ರಕಾರ ವಸಂತ್​ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಅಲ್ಲದೆ ಪತ್ನಿ ನೀಡಿರುವ ದೂರಿನಲ್ಲಿ ವಸಂತ್ ತನ್ನ ಪತ್ನಿಗೆ ನಿತ್ಯ ಲೈಂಗಿಕ ವಿಡಿಯೋಗಳನ್ನು ತೋರಿಸಿ ಅದರಲ್ಲಿರುವಂತೆ ಸಹಕರಿಸುವಂತೆ ಪೀಡಿಸುತ್ತಿದ್ದ ಎಂದು ಪತ್ನಿ ದೂರು ನೀಡಿದ್ದಾಳೆ. 'ವಸಂತ್​ ನನಗೆ ನಿತ್ಯ ಪೋರ್ನ್​ ವಿಡಿಯೋಗಳನ್ನು ತೋರಿಸುತ್ತಾನೆ. ನನಗೆ ಇಷ್ಟವಿಲ್ಲ ಎಂದರೂ ನೋಡುವಂತೆ ಒತ್ತಡ ಹೇರುತ್ತಾನೆ. ಅಲ್ಲದೆ, ಅದರಂತೆ ನಡೆದುಕೋ ಎಂದು ಕಿರುಕುಳ ನೀಡುತ್ತಾನೆ. ಆತ ನೀಡುವ ಲೈಂಗಿಕ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ವಸಂತ್​ ಪತ್ನಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ವಸಂತ್​ ತಲೆಮರಿಸಿಕೊಂಡಿದ್ದಾನೆ. ಆತನಿಗಾಗಿ ನೆಲಮಂಗಲ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp