ಹಾವೇರಿ: ನದಿ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕಿಯರು ನೀರುಪಾಲು!

ಸ್ನಾನಕ್ಕಾಗಿ ನದಿಗಿಳಿದಾಗ ನೀರಿನ ಸೆಳವಿಗೆ ಸಿಕ್ಕು ಮೂವರು ಬಾಲಕಿಯರು ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ನಡೆದಿದೆ.

Published: 10th February 2019 12:00 PM  |   Last Updated: 10th February 2019 06:07 AM   |  A+A-


Three girls drown to death when they go for a river boat at Haveri

ಹಾವೇರಿ: ನದಿ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕಿಯರು ನೀರುಪಾಲು!

Posted By : RHN RHN
Source : Online Desk
ಹಾವೇರಿ: ಸ್ನಾನಕ್ಕಾಗಿ ನದಿಗಿಳಿದಾಗ ನೀರಿನ ಸೆಳವಿಗೆ ಸಿಕ್ಕು ಮೂವರು ಬಾಲಕಿಯರು ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ನಡೆದಿದೆ.

ರಾಣೆಬೆನ್ನೂರು ತಾಲೂಕಿನ ಕೂಲಿ ಗ್ರಾಮದ ಕುಮುದ್ವತಿ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾಗ ಸುಮನ ತುಮ್ಮಿನಕಟ್ಟಿ (9), ನಿಶತ್ ಬಾನು ಪಾಟೀಲ (13) ಮತ್ತು ಮುಜನ್ ಮಿಲ್ ತೋಟದ (14) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಶಾಲೆಗೆ ರಜೆ ಇದ್ದ ಕಾರಣ ಬಾಲಕಿಯರು ನದಿಗೆ ತೆರಳಿದ್ದರು ಎನ್ನಲಾಗಿದೆ. ಸ್ಥಳೀತ್ಯರು ನೀರಲಿ ಮುಳುಗಿದ್ದ ಬಾಲಕಿಯರ ಮೃತದೇಹವನ್ನು ಹೊರತೆಗೆದಿದ್ದು ಬಾಲಕಿಯರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಮಾಹಿತಿ ತಿಳಿದ ಹಲಗೇರಿ ಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp