'ಮೋದಿ ಹಿಂದಕ್ಕೆ ಹೋಗಿ' ಅಭಿಯಾನಕ್ಕೆ ಪರ್ಯಾಯವಾಗಿ 'ಮೋದಿ ಮತ್ತೊಮ್ಮೆ ಬನ್ನಿ' ಅಭಿಯಾನ!

ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತದ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಗೆ ಭೇಟಿ ನೀಡುವುದನ್ನು ವಿರೋಧಿಸಿ ಟ್ವಿಟರ್ ನಲ್ಲಿ #GoBackModi ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟರ್ ಅಭಿಯಾನ ಪ್ರಾರಂಭಿಸಲಾಗಿತ್ತು.
ಮೋದಿ ಹಿಂದಕ್ಕೆ ಹೋಗಿ ಅಭಿಯಾನಕ್ಕೆ ಪರ್ಯಾಯವಾಗಿ ಮೋದಿ ಮತ್ತೊಮ್ಮೆ ಬನ್ನಿ ಅಭಿಯಾನ!
ಮೋದಿ ಹಿಂದಕ್ಕೆ ಹೋಗಿ ಅಭಿಯಾನಕ್ಕೆ ಪರ್ಯಾಯವಾಗಿ ಮೋದಿ ಮತ್ತೊಮ್ಮೆ ಬನ್ನಿ ಅಭಿಯಾನ!
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತದ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಗೆ ಭೇಟಿ ನೀಡುವುದನ್ನು ವಿರೋಧಿಸಿ ಟ್ವಿಟರ್ ನಲ್ಲಿ #GoBackModi ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟರ್ ಅಭಿಯಾನ ಪ್ರಾರಂಭಿಸಲಾಗಿತ್ತು. ಈಗ ಕರ್ನಾಟಕದಿಂದ ಇದಕ್ಕೆ ಪರ್ಯಾಯವಾಗಿ #ComeBackModi ಎಂಬ ಟ್ವಿಟರ್ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. 
ಮೋದಿ ಪರವಾಗಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಪ್ರಚಾರ ಮಾಡುತ್ತಿರುವ ಟೀಂ ಮೋದಿ  ಸಂಘಟನೆ #ComeBackModi ಟ್ವಿಟರ್ ಅಭಿಯಾನಕ್ಕೆ ಚಾಲನೆ ನೀಡಲಿದೆ. ಫೆ.11 ರಂದು ಬೆಳಿಗ್ಗೆ 8 ಗಂಟೆಗೆ ಈ ಅಭಿಯಾನ ಟ್ವಿಟರ್ ನಲ್ಲಿ ಪ್ರಾರಂಭವಾಗಲಿದೆ. ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಟೀಂ ಮೋದಿ ಸಂಘಟನೆ ಸದಸ್ಯ ಮನೋಹರ್, "ಮೋದಿಯ ಭೇಟಿಯನ್ನು ವಿರೋಧಿಸಿ  #GoBackModi ಎಂಬ ಅಭಿಯಾನವನ್ನು ಟ್ವಿಟರ್ ನಲ್ಲಿ ಮಾಡಲಾಗಿತ್ತು. ಆದರೆ ರಾಜ್ಯಕ್ಕೆ ಹಾಗೂ ದೇಶಕ್ಕೆ ಮೋದಿಯ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಬೇಕಾಗಿದೆ. ಆದ್ದರಿಂದ ಟೀಂ ಮೋದಿ ಟ್ವಿಟರ್ ನಲ್ಲಿ #ComeBackModi ಎಂಬ ಹ್ಯಾಷ್ ಟ್ಯಾಗ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದೆ  ಆಸಕ್ತರು ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು #ComeBackModi ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com