ಬೆಂಗಳೂರಲ್ಲಿ ಸಾವಿರಾರು ಕಿಮೀ ರಸ್ತೆ ಇದೆ, ಪ್ರತಿದಿನ ಗುಂಡಿ ಮುಚ್ಚೋಕಾಗಲ್ಲ: ಸಾರಿಗೆ ಸಚಿವ ತಮ್ಮಣ್ಣ

"ನೀವು ಓಡಾಡುವ ರಸ್ತೆಯಲ್ಲಿ ಗುಂಡಿಗಳಿದೆಯೆ, ಹಾಗಾದರೆ ಎಚ್ಚರದಿಂಡ ವಾಹನ ಚಲಾಯಿಸಿ" ಹೀಗೆಂದವರು ಯಾರೋ ಹಿರಿಯ ನಾಗರಿಕರಾಗಲಿ, ಸಾಮಾನ್ಯ ಜನರಾಗಲಿ ಅಲ್ಲ. ಬದಲಿಗೆ ಕರ್ನಾಟಕ ಸರ್ಕಾರದ....

Published: 12th February 2019 12:00 PM  |   Last Updated: 12th February 2019 12:21 PM   |  A+A-


File Image

ಸಂಗ್ರಹ ಚಿತ್ರ

Posted By : RHN RHN
Source : The New Indian Express
ಬೆಂಗಳೂರು: "ನೀವು ಓಡಾಡುವ ರಸ್ತೆಯಲ್ಲಿ ಗುಂಡಿಗಳಿದೆಯೆ, ಹಾಗಾದರೆ ಎಚ್ಚರದಿಂಡ ವಾಹನ ಚಲಾಯಿಸಿ" ಹೀಗೆಂದವರು ಯಾರೋ ಹಿರಿಯ ನಾಗರಿಕರಾಗಲಿ, ಸಾಮಾನ್ಯ ಜನರಾಗಲಿ ಅಲ್ಲ. ಬದಲಿಗೆ ಕರ್ನಾಟಕ ಸರ್ಕಾರದ ಸಾರಿಗೆ ಸಚಿವ ಡಿಸಿ ತಮ್ಮಣ್ಣ. ಹೌದು, ಸೋಮವಾರ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಸಚಿವರು ಬೆಂಗಳೂರು  ಸಾವಿರಾರು ಕಿಲೋಮೀಟರ್ ರಸ್ತೆಯನ್ನು ಹೊಂದಿದೆ. ಈ ಕಾರಣದಿಂದ  ಪ್ರತಿದಿನ ಗುಂಡಿಗಳ ಪರಿಶೀಲನೆ, ಅದರ ದುರಸ್ತಿಯನ್ನೇ ಮಾಡುತ್ತಾ ಕೂರಲು ಸಾಧ್ಯವಿಲ್ಲ ಎಂದಿದ್ದಾರೆ.

ರಸ್ತೆ ಸುರಕ್ಷತೆ ಸಂಬಂಧ ಮಾತನಾಡಿದ ಸಚಿವರು "ಮಳೆ ಬಂದಾಗ ರಸ್ತೆಯ ಗುಂಡಿಗಳು ಮತ್ತೆ ಬಾಯ್ತೆರೆದುಕೊಳ್ಳುತ್ತವೆ. ಹಾಗಾಗಿ ವಾಹನ ಸವಾರರು ರಸ್ತೆ ಗುಣಮಟ್ಟವನ್ನು ನೋಡಿಕೊಂಡು ಎಚ್ಚರಿಕೆಯಿಂದ ಪ್ರಯಾಣಿಸಬೇಕು.ಅಲ್ಲದೆ ಬೇರೆ ವಾಹನಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು" ಎಂದಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರ ಹಲವು ರಸ್ತೆಗಳನ್ನು ಅಭಿವೃದ್ದಿಪಡಿಸಿದೆ.ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣಕ್ಕಾಗಿ ಉತ್ತಮ ರಸ್ತೆಗಳನ್ನು ಬಳಸಲಾಗುತ್ತಿದೆ. ಹೀಗಾಗಿ, ಟ್ರಾಫಿಕ್ ನಿಯಮಗಳು ಮತ್ತು ವೇಗದ ಮಿತಿಗಳನ್ನು ಅನುಸರಿಸುವುದರ ಮೂಲಕ ಅಪಘಾತದ ಪ್ರಮಾಣವನ್ನು ತಗ್ಗಿಸುವಲ್ಲಿ ಸರ್ಕಾರದೊಡನೆ ಸಾರ್ವಜನಿಕರೂ ಕೈಜೋಡಿಸಬೇಕು.. ಅವರು ತಮ್ಮ ಜೀವನ ಮತ್ತು ಇತರರ ಬಗ್ಗೆ ಕಾಳಜಿ ವಹಿಸಬೇಕು, ಆಗ ನಾವು ಅಪಘಾತಗಳನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.

ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ.ಈ ಕುರಿತಂತೆ ಆತಂಕ ವ್ಯಕ್ತಪಡಿಸಿದ ಅವರು "ನಾವು ಬಿಎಂಟಿಸಿಗೆ ಪರಿಸರ ಸ್ನೇಹಿ ಬಸ್ಸುಗಳನ್ನು ಖರೀದಿಸಲು ಮಾತುಕತೆ ನಡೆಸುತ್ತೇವೆ. ವಾಹನ ದಟ್ಟಣೆಯಿಂದ ಮಾಲಿನ್ಯ, ಮಾಲಿನ್ಯದಿಂದ  ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ಜನರು ಬೆಂಗಳೂರಿನ ಜೀವನ ಕಠಿಣವೆನ್ನುವುದನ್ನು ಕಂಡಿದ್ದಾರೆ" ಎಂದರು.
Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp