ಲಂಚ ಪ್ರಕರಣ: ಮೂವರು ಬಿಜೆಪಿ, ಓರ್ವ ಜೆಡಿಎಸ್ ಮುಖಂಡರ ವಿರುದ್ಧ ದೂರು ದಾಖಲು

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಲ್ಲಿ ಬಿಜೆಪಿಯ ಮೂವರು ಹಾಗೂ ಜೆಡಿಎಸ್ ನ ಓರ್ವ ಶಾಸಕರ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಮುಖಂಡರ ಡಾ.ಅಶ್ವತ್ಥ ನಾರಾಯಣ್, ಡಾ. ವಿಶ್ವನಾಥ್.....
ಎಸಿಬಿ
ಎಸಿಬಿ
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಲ್ಲಿ ಬಿಜೆಪಿಯ ಮೂವರು ಹಾಗೂ ಜೆಡಿಎಸ್ ನ ಓರ್ವ ಮುಖಂಡರ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಶಾಸಕ ಡಾ.ಅಶ್ವತ್ಥ ನಾರಾಯಣ್, ಡಾ. ವಿಶ್ವನಾಥ್, ಮಾಜಿ ಶಾಸಕ ಸಿಪಿ ಯೋಗೀಶ್ವರ್ ಹಾಗೂ ಜೆಡಿಎಸ್ ನ ಶಾಸಕ  ಕೆ. ಶ್ರೀನಿವಾಸ ಗೌಡ ವಿರುದ್ಧ ದೂರು ದಾಖಲಿಸಲಾಗಿದೆ. ಮೊದಲ ಮೂವರು ಲಂಚ ನೀಡಿದ್ದಾರೆಂದು ದೂರು ದಾಖಲಾಗಿದ್ದರೆ ಶ್ರೀನಿವಾಸ್ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ಭಾನುವಾರ  ಶ್ರೀನಿವಾಸ್ ಆರೋಪ ಮಾಡಿದ ಬೆನ್ನಲ್ಲೇ ಈ ದೂರು ದಾಖಲಾಗಿದೆ.ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರಲು ಶ್ರೀನಿವಾಸ್ ಗೌಡರಿಗೆ  5 ಕೋಟಿ ರೂ. ಮುಂಗಡ ಹಣ ನಿಡುವುದಾಗಿ ಈ ಮೂವರೂ ಹೇಳಿದ್ದರು ಎನ್ನಲಾಗಿದೆ. ಅಲ್ಲದೆ ಮುಂದಿನ ಸರ್ಕಾರದಲ್ಲಿ ಸಚಿವ ಸ್ಥಾನದ ಆಮಿಷವನ್ನೂ ಒಡ್ಡಿದ್ದರು ಎಂದು ತಿಳಿದುಬಂದಿದೆ.ವಿರೋಧ ಪಕ್ಷದ ನಾಯಕರು ನೀಡಿದ ಲಂಚ ಸ್ವೀಕರಿಸಿದ್ದಕ್ಕೆ ಶ್ರೀನಿವಾಸ್ ವಿರುದ್ಧ ಪ್ರಶಾಂತ್ ಎಂಬ ಸಾಮಾಜಿಕಕಾರ್ಯಕರ್ತರು ದೂರು ದಾಖಲಿಸಿದ್ದಾರೆ.
ಭಾನುವಾರ ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದು ಆ ಹೇಳಿಕೆ ಆಧಾರದಲ್ಲಿ ಸೋಮವಾರ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ದೂರಿತ್ತಿದಾರೆ. ದೂರಿನಲ್ಲಿರುವಂತೆ  ಒಪ್ಪಂದದ ಭಾಗವಾಗಿ 5 ಕೋಟಿ ರೂ. ಮುಂಗಡವ ಹಣವನ್ನು ಇದಾಗಲೇ ಶ್ರೀನಿವಾಸ್ ಗೆ ನೀಡಲಾಗಿದೆ/ಒಟ್ಟಾರೆ  25 ಕೋಟಿ ರೂ ನಿಡುವುದಾಗಿ ಮೂವರು ಬಿಜೆಪಿ ನಾಯಕರು ಮಾತು ನೀಡಿದ್ದರು.. "ನಾನು ರಾಜೀನಾಮೆ ನಿಡಿದ್ ಜೆಡಿಎಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾದರೆ ಅವರು 25ಕೋಟಿ ರು.ನೀಡುತ್ತಾರೆ. ಇದಕ್ಕೆ ಮುಂಗಡವಾಗಿ  5 ಕೋಟಿ ರೂ. ಇದಾಗಲೇ ನೀಡಿದ್ದಾರೆ" ಶ್ರೀನಿವಾಸ್ ಬಾನುವಾರ ಹೇಳಿಕೆ ನಿಡಿದ್ದರು.ಈ ವಿಷಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತರುವ ಮೊದಲು ಎರಡು ತಿಂಗಳ ಕಾಲ ನನ್ನ ನಿವಾಸದಲ್ಲಿ ನಾನು ಹಣವನ್ನು ಇಟ್ಟುಕೊಂಡಿದ್ದೆ,. ಅವರು ಹಣವನ್ನು ಬಿಜೆಪಿಗೆ ಹಿಂದಿರುಗಿಸಲು ಸಲಹೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತ , ಜೆಡಿಎಸ್  ನ ಶ್ರೀನಿವಾಸ್ ಗೌಡ ಸೇರಿದಂತೆ ಎಲ್ಲಾ ನಾಲ್ವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.. "ಶ್ರೀನಿವಾಸ್ ಲಂಚ ಸ್ವೀಕರಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಂದಿದ್ದಾರೆ. ಇತರರು ಶಾಸಕರೊಬ್ಬರಿಗೆ ಇಷ್ಟು ದಿಡ್ಡ ಮೊತ್ತ ನೀಡುವ ಮೂಲಕ ಗಂಭೀರ ಅಪರಾಧ ಮಾಡಿದ್ದಾರೆ" ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com