ವಿದ್ಯುತ್ ಸ್ಪರ್ಶ ಪ್ರಕರಣ: ಬಿಬಿಎಂಪಿ, ಬೆಸ್ಕಾಮ್ ಅಧಿಕಾರಿಗಳ ವಿರುದ್ಧ ದೂರು ದಾಖಲು

: ಹೆಚ್ಚು ಶಕ್ತಿಯುತ ವಿದ್ಯುತ್ ಹರಿಯುವ ತಂತಿಗಳ ಸಮೀಪವೇ ಎರಡಂತಸ್ತಿನ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಂದಿನಿ....
ಗಾಯಾಳು ರಮೇಶ್ ಹಾಗೂ ಯಶೋಧಾ ಅವರ ಸಂಬಂಧಿಗಳು
ಗಾಯಾಳು ರಮೇಶ್ ಹಾಗೂ ಯಶೋಧಾ ಅವರ ಸಂಬಂಧಿಗಳು
ಬೆಂಗಳೂರು: ಹೆಚ್ಚು ಶಕ್ತಿಯುತ ವಿದ್ಯುತ್ ಹರಿಯುವ ತಂತಿಗಳ ಸಮೀಪವೇ ಎರಡಂತಸ್ತಿನ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಂದಿನಿ ಲೇಔಟ್ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೆಚ್ಚು ಶಕ್ತಿಯುತ ವಿದ್ಯುತ್ ಪ್ರವಹಿಸುವ ತಂತಿಗಳ ಸಮೀಪ  ಮನೆ ನಿರ್ಮಿಸಲು ನಿಯಮ ಇಉಲ್ಲಂಘನೆ ಮಾಡಿದ ಆರೋಪದಡಿ ಮನೆ ಮಾಲೀಕ ಗಂಗರಾಜು ವಿರುದ್ಧ ಸಹ ಪೋಲೀಸರು ದೂರು ದಾಖಲಿಸಿದ್ದಾರೆ. ವಿಚಾರಣೆಗಾಗಿ ಪೋಲೀಸರೆದುರು ಹಾಜರಾಗಬೇಕೆಂದು ಅವರಿಗೆ ನೋಟೀಸ್ ಜಾರಿಯಾಗಿದೆ.
ವಿದ್ಯುತ್ ಪ್ರವಹಿಸಿ ಓರ್ವ ವ್ಯಕ್ತಿ ಶೇ.60ರಷ್ಟು ಸುಟ್ಟು ಹೋಗಿರುವ ಘಟನೆ ಭಾನುವಾರ ಮಧ್ಯಾಹ್ನ ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದ್ದು ಸೋಮವಾರ ಬೆಸ್ಕಾಂ ಅಧಿಕಾರಿಗಲು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದರು. 
ಘಟನೆಯಲ್ಲಿ ಗಾಯಗೊಂಡ ರಮೇಶ್ ಅವರ ಪತ್ನಿ ಮಂಜುಳಾ ಪತ್ರಿಕೆಯೊಡನೆ ಮಾತನಾಡಿ  "ನನ್ನ ಪತಿ ರಮೇಶ್ ಕಿರುಚುವುದನ್ನು ಕೇಳಿ ಅಡುಗೆಮನೆಯಲ್ಲಿದ್ದೆ ನಾನು ಬಾಲ್ಕನಿಯಲ್ಲಿ ಏನಾಗಿದೆ ಎಂದು ನೋಡಲು ಹೊರಗೋಡಿ ಬಂದಿದ್ದೆ. ಆಗ ವಿದ್ಯುತ್ ತಂತಿಯಲ್ಲಿ ಕಿಡಿಗಳು ಬರುತಿತ್ತು. ಆಗ ಅಲ್ಲಿದ್ದ ನಮ್ಮ ನೆರೆಮನೆಯಾಕೆ ಯಶೋಧಾ ವಿದ್ಯುತ್ ಆಘಾತಕ್ಕೀಡಾಗಿದ್ದ ನನ್ನ ಪತಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅವರಿಗೆ ಸಹ ಶಾಕ್ ಹೊಡೆದಿದೆ." ಎಂದರು.
ರಮೇಶ್ ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸುಟ್ಟಗಾಯಗಳಿಂದ ಚೇತರಿಸಿಕೊಂಡಿದ್ದಾರೆ.
"ರಮೇಶ್ ಆಟೋ ಚಾಲಕನಾಗಿದ್ದು ಘಟನೆ ನಡೆದ ವೇಳೆ ಯಶೋಧಾ ಅವರ ನೆರವಿಗೆ ಧಾವಿಸಿದ್ದರು.ಯಶೋಧಾ , ರಮೇಶ್ ಕುಟುಂಬಕ್ಕೆ ಬಹಳ ಹತ್ತಿರದವರಾಗಿದ್ದು ರಮೇಶ್ ಆಟೋ ರಿಕ್ಷಾವನ್ನು ಖರೀದಿಸಲು ಸಹಾಯ ಮಾಡಿದ್ದರು. ಕೇಬಲ್ ಆಪರೇಟರ್ ಮಣಿಕಂಠ ಹಾಗೂ ರಮೇಶ್ ಆಂಟೆನಾ ಸರಿಮಾಡುವ ವೇಳೆ ಯಶೋಧಾ ಬಲ್ಕನಿಯಲ್ಲೇ ಇದ್ದರು. ಅದಾಗ ವಿದ್ಯುತ್ ಸ್ಪರ್ಶವಾಗಿ ರಮೇಶ್ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com