ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಟೆಕ್ಕಿ ಬಂಧನ

ಯುವತಿಯೊಬ್ಬಳ ಮೇಲೆ ಅವಳ ಹುಟ್ಟುಹಬ್ಬದ ಪಾರ್ಟಿಯಲ್ಲೇ ಅತ್ಯಾಚಾರ ನಡೆಸಿದ ಆರೋಪದ ಮೇಲೆ 26 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಓರ್ವನನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ

Published: 12th February 2019 12:00 PM  |   Last Updated: 12th February 2019 12:24 PM   |  A+A-


Techie held for raping MBA student at birthday party

ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಟೆಕ್ಕಿಯ ಬಂಧನ

Posted By : RHN RHN
Source : The New Indian Express
ಬೆಂಗಳೂರು: ಯುವತಿಯೊಬ್ಬಳ ಮೇಲೆ ಅವಳ ಹುಟ್ಟುಹಬ್ಬದ ಪಾರ್ಟಿಯಲ್ಲೇ ಅತ್ಯಾಚಾರ ನಡೆಸಿದ ಆರೋಪದ ಮೇಲೆ  26 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಓರ್ವನನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಸಂತ್ರಸ್ಥ ಯುವತಿ 24  ವಯಸ್ಸಿನ ಎಂಬಿಎ ವಿದ್ಯಾರ್ಥಿನಿಯಾಗಿದ್ದು ಆಕೆಯ ಹುಟ್ಟುಹಬ್ಬದ ಸಮಾರಂಬಕ್ಕಾಗಿ ತನ್ನ ಗೆಳತಿಯ ಮನೆಗೆ ಬಂದಿದ್ದಾಗ ಆಕೆಗೆ ಹೆಚ್ಚು ಪ್ರಮಾಣದ ಆಲ್ಕೋಹಾಲ್ ನೀಡಿ ಬಳಿಕ ಅವಳ ಮೇಲೆ ಅತ್ಯಾಚಾರ ನಡೆಸಲಾಗಿದೆ.

ಬಂಧಿತನನ್ನು ಆದಿತ್ಯ ಎಂದು ಗುರುತಿಸಲಾಗಿದ್ದು ಸಂತ್ರಸ್ಥೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಸಂತ್ರಸ್ಥ ಯುವತಿ ಕೆಲ ಸಮಯದ ಬಳಿಕ ದೂರು ಹಿಂಪಡೆಯಲು ಆಗಮಿಸಿದ್ದಾಳೆ. ಆದರೆ ಪೋಲೀಸರು ಇದಾಗಲೇ ಎಫ್ಐಆರ್ ದಾಖಲಾಗಿರುವ ಕಾರಣ ದೂರು ಹಿಂದೆ ಪಡೆಯುವಂತಿಲ್ಲ. ನೀವು ಕಾನೂನು ಪ್ರಕಾರ ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದಿದ್ದಾರೆ.

ಫೆ.9ರ ರಾತ್ರಿ 7.30ರ ವೇಳೆ ತಮಿಳುನಾಡಿನ ಮೂಲದ ಯುವತಿ ನಗರದ ದೊಡ್ಡಾನೆಕುಂದಿ ಅಲ್ಲಿರುವ ತನ್ನ ಸ್ನೇಹಿತೆಯ  ಮನೆಗೆ ತೆರಳಿದ್ದಾಳೆ. ಅಲ್ಲಿ ಆಕೆಯ ಗೆಳತಿ ಆದಿತ್ಯನನ್ನು ಪರಿಚಯಿಸಿದ್ದಾಳೆ. ಆದಿತ್ಯ ಮೂಲತಃಅ ಕರ್ನೂಲಿನವನಾಗಿದ್ದ. ಬಳಿಕ ಎಲ್ಲರೂ ಮದ್ಯ ಸೇವನೆ ಮಾಡಿದ್ದು ತಡರಾತ್ರಿಯ ವೇಳೆ ಯುವತಿಯನ್ನು ಆದಿತ್ಯನೊಡನೆ ಬಿಟ್ಟು ಆಕೆಯ ಗೆಳತಿ ಊಟ ತರಲು ಹೊರಗೆ ಹೋಗಿದ್ದಾಳೆ.ಆಗ ಯುವತಿ ತಾನು ಮಲಗಲು ತೆರಳಿದಾಗ ಆದಿತ್ಯ ಅವಳ ಮೇಲೆ ಅತ್ಯಾಚಾರ ನಡೆಸಿದ್ದ. ಮದ್ಯದ ನಶೆಯಲ್ಲಿದ್ದ ಯುವತಿಗೆ ಆತನನ್ನು ತಡೆಯಲು ಸಾಧ್ಯವಾಗಲಿಲ್ಲ. ಗೆಳತಿ ಮನೆಗೆ ಮರಳಿದ ವೇಳೆ ಇಬ್ಬರೂ ಅತ್ಯಂತ ಸಮೀಪದಲ್ಲಿ ಇರುವುದು ಕಂಡಿದ್ದಾಳೆ. ಮರುದಿನ ಯುವತಿಗೆ ಪ್ರಜ್ಞೆ ಮರಳಿದಾಗ ತಾನು ಅತ್ಯಾಚಾರಕ್ಕೆ ಒಳಗಾಗಿದ್ದದ್ದು ತಿಳಿದಿದೆ. ಆಕೆ  ಎಚ್ಎಎಲ್ ಪೊಲೀಸರನ್ನು ಭೇಟಿಯಾಗಿ ದೂರಿತ್ತಿದ್ದಾಳೆ.

ನಿಜಕ್ಕೂ ಯುವತಿಗೆ ಆದಿತ್ಯನ ಪರಿಚಯವೇ ಇರಲಿಲ್ಲ ಎಂದು ಪೋಲೀಸರು ತಿಳಿಸಿದ್ದು ಯುವತಿಯು ತಮಿಳು ನಾಡಿನವಳಾಗಿದ್ದು ಆಕೆ ನಗರದ ಪಿಜಿಯೊಂದರಲ್ಲಿ ವಾಸವಿದ್ದಳು. ಅವಳು ಇಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು. ಯುವತಿಯು ಆದಿತ್ಯನ ಗೆಳತಿಯನ್ನು ಬಹಳ ಹಚ್ಚಿಕೊಂಡಿದ್ದಳು. ಹಲವಾರು ಬಾರಿ ಇಬ್ಬರೂ ನಗರದಿಂದ ಘೊರಗೆ ಒಟ್ಟಾಗಿ ಪಿಕ್ ನಿಕ್ ತೆರಳಿದ್ದರು ಎಂದು ಅವರು ಹೇಳಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp