7 ದಿನಗಳ ಕಾಲ ನಡೆಯುವ ಸೋಮಯಾಗಕ್ಕೆ ಸಜ್ಜಾಗುತ್ತಿದೆ ಕಾಸರಗೋಡು

ಕೊಂಡೆವೂರು ನಿತ್ಯಾನಂದ ಯೋಗಾಶ್ರಮದಲ್ಲಿ ಫೆ. 18ರಿಂದ 24ರ ತನಕ ನಡೆಯಲಿರುವ ಅತಿರಾತ್ರ ಸೋಮಯಾಗಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ....
ಸೋಮಯಾಗಕ್ಕಾಗಿ ಸಿದ್ಧತೆ
ಸೋಮಯಾಗಕ್ಕಾಗಿ ಸಿದ್ಧತೆ
ಮಂಗಳೂರು:  ಕೊಂಡೆವೂರು ನಿತ್ಯಾನಂದ ಯೋಗಾಶ್ರಮದಲ್ಲಿ ಫೆ. 18ರಿಂದ 24ರ ತನಕ ನಡೆಯಲಿರುವ ಅತಿರಾತ್ರ ಸೋಮಯಾಗಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ.
ಜ. 20 ರಂದು ಸಂಜೆ ಮುಲುಂಡ್‌ನ‌ ನವೋದಯ ವಿದ್ಯಾಲಯದ ಸಭಾಗೃಹದಲ್ಲಿ ಫೆ. 18 ರಿಂದ ಸಪ್ತಾಹವಾಗಿ ಕೊಂಡೆವೂರುನಲ್ಲಿ ಜರಗುವ "ವಿಶ್ವಜಿತ್‌ ಅತಿರಾತ್ರ ಸೋಮಯಾಗ' ನಿಮಿತ್ತ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ ಸಮಿತಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದರು.
ಯಾಗಕ್ಕಾಗಿ 7 ಸಾವಿರ ಅಡಿ ಪೆಂಡಾಲ್ ಹಾಕಲಾಗುತ್ತಿದೆ. ಲೋಕ ಕಲ್ಯಾಣಕ್ಕಾಗಿ ನಡೆಯುತ್ತಿರುವ ಈ ಯಾಗದಲ್ಲಿ ಸೋಮರಸ ಪ್ರಮುಖವಾಗಿ ನೀಡಲಾಗುತ್ತದೆ.ಪುರಾತನ ಸಂಪ್ರದಾಯದಂತೆ ಈ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ,. ಒಂದು ವಾರಗಳ ಕಾಲ ನಡೆಯುವ ಈ ಯಾಗದಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com