ಬೆಂಗಳೂರು: ನೈಸ್ ರಸ್ತೆ ಬಳಿ ಅಗ್ನಿ ಅವಘಡ, ಪೇಂಟ್ ಗೋಡೌನ್​ ಬೆಂಕಿಗಾಹುತಿ

ಬೆಂಗಳೂರಿನ ನೈಸ್ ರಸ್ತೆ ಬಳಿ ಇರುವ ಪೇಂಟ್ ಫ್ಯಾಕ್ಟರಿಯಲ್ಲಿ ​ಅಗ್ನಿ ಅವಘಡ ಸಂಭವಿಸಿದ್ದು, ಗೋಡೌನ್ ಸಂಪೂರ್ಣ...

Published: 13th February 2019 12:00 PM  |   Last Updated: 13th February 2019 07:09 AM   |  A+A-


Major fire in paint factory godown near NICE road

ಬೆಂಕಿ ನಂದಿಸುತ್ತಿರುವ ಅಗ್ನಿ ಶಾಮಕ ಸಿಬ್ಬಂದಿ

Posted By : LSB LSB
Source : Online Desk
ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆ ಬಳಿ ಇರುವ ಪೇಂಟ್ ಫ್ಯಾಕ್ಟರಿಯಲ್ಲಿ ​ಅಗ್ನಿ ಅವಘಡ ಸಂಭವಿಸಿದ್ದು, ಗೋಡೌನ್ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಬುಧವಾರ ನಡೆದಿದೆ.

ಇಂದು ಮಧ್ಯಾಹ್ನ ಮಾದನಾಯಕನಹಳ್ಳಿ ವ್ಯಾಪ್ತಿಯ ಕುದುರೆಗೆರೆ ಕಾಲೋನಿ ಸಮೀಪದ ಬಣ್ಣ ತಯಾರು ಮಾಡುವ ಕಾರ್ಖಾನೆಗೆ ಸೇರಿದ ಗೋಡೌನ್ ನಲ್ಲಿ ಈ ಅವಘಡ ಸಂಭವಿಸಿದ್ದು, ಅಲ್ಲಿ ಬಣ್ಣ ತಯಾರಿಕೆಗೆ ಬಳಸುವ ತೈಲವನ್ನು ಸಾವಿರಾರು ಪ್ಲಾಸ್ಟಿಕ್ ಡ್ರಮ್‍ಗಳಲ್ಲಿ ಸಂಗ್ರಹಿಸಿಡಲಾಗಿತ್ತು.

ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 

ಸ್ಥಳಕ್ಕೆ ಪೊಲೀಸರು ಧಾವಿಸಿ ಮಾಹಿತಿ ಪಡೆಯುತ್ತಿದ್ಧಾರೆ. ದೊಡ್ಡ ಬೆಂಕಿಯ ಜ್ವಾಲೆ ಕಂಡು ಜನರು ಭಯಭೀತರಾಗಿದ್ಧಾರೆ.

ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ಧಾರೆ. ಆದರೂ ಜ್ವಾಲೆ ನಿಯಂತ್ರಣಕ್ಕೆ ಬಾರದೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp