ಕುವೆಂಪು ವಿಶ್ವವಿದ್ಯಾಲಯದ'ಚಿನ್ನದ ಹುಡುಗಿ'ಸಾಧನೆಗೆ ಅಡ್ಡಿಯಾಗದ ಬಡತನ

ಕುವೆಂಪು ವಿಶ್ವ ವಿದ್ಯಾಲಯದ 29 ನೇ ಘಟಿಕೋತ್ಸವದಲ್ಲಿ ಎಂಎ ಕನ್ನಡ ವಿಭಾಗದಲ್ಲಿ ಕೆಎ ನೇತ್ರಾವತಿ ಏಳು ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಚಿನ್ನದ ಹುಡುಗಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ
ತಂದೆ ತಾಯಿ ಜೊತೆಗೆ ನೇತ್ರಾವತಿ
ತಂದೆ ತಾಯಿ ಜೊತೆಗೆ ನೇತ್ರಾವತಿ

ಶಿವಮೊಗ್ಗ: ಭದ್ರಾವತಿಯ ಶಂಕರಘಟ್ಟದ ಕುವೆಂಪು ವಿಶ್ವ ವಿದ್ಯಾಲಯದ 29 ನೇ ಘಟಿಕೋತ್ಸವದಲ್ಲಿ  ಎಂಎ ಕನ್ನಡ ವಿಭಾಗದಲ್ಲಿ ಕೆಎ ನೇತ್ರಾವತಿ ಏಳು ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಚಿನ್ನದ ಹುಡುಗಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈಕೆಯ ಸಾಧನೆಗೆ ಬಡತನ ಅಡ್ಡಿಯಾಗಿಲ್ಲ.

ಚಿಕ್ಕಮಗಳೂರಿನ ನೇತ್ರಾವತಿ ಐಡಿಎಸ್ ಜಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯಾಗಿರುವ ನೇತ್ರಾವತಿ ತಂದೆ ಅಣ್ಣಪ್ಪ ಹಾಗೂ ತಾಯಿ ತಂಗವ್ವ ಇಬ್ಬರು ಕೃಷಿ ಕಾರ್ಮಿಕರು. ಚಿಕ್ಕಮಗಳೂರು ತಾಲೂಕಿನ ಕುರವಂಗಿಯ ಕಾಲೋನಿಯೊಂದರಲ್ಲಿ ಈ ಮೂವರು ವಾಸಿಸುತ್ತಿದ್ದಾರೆ.

 ಕುರವಂಗಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿರುವ  ನೇತ್ರಾವತಿ,  ಚಿಕ್ಕಮಗಳೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಈ ಹಂತದವರೆವಿಗೂ ಡಿಸ್ಟಿಂಕ್ಷನ್ ಪಡೆಯದ ನೇತ್ರಾವತಿ , ಪದವಿಗಾಗಿ ಐಡಿಎಸ್ ಜಿ ಕಾಲೇಜಿಗೆ ಸೇರಿದ ನಂತರ ಓದಿನತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ಪದವಿ ಪರೀಕ್ಷೆಯಲ್ಲೂ ಚೆನ್ನಾಗಿ ಬರೆದಿರಲಿಲ್ಲ ಆದರೆ, ಕನ್ನಡದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ದೊರೆತ ನಂತರ  ಉಪನ್ಯಾಸಕರು ಓದಿನತ್ತ ಶ್ರಮಹಾಕುವಂತೆ ಪ್ರೋತ್ಸಾಹಿಸಿದರು ಎಂದು ಅವರು ಹೇಳುತ್ತಾರೆ.

ಮಗಳ ಸಾಧನೆಯಿಂದ ಸಂತೋಷಗೊಂಡಿರುವ ಅಣ್ಣಪ್ಪ, ನಾನು ಮತ್ತು ನನ್ನ ಹೆಂಡತಿ ಓದಿಲ್ಲ. ನಾವು ಪಟ್ಟ ರೀತಿಯಲ್ಲಿ ನಮ್ಮ ಮಗಳು ಕಷ್ಟಪಡಬಾರದು ಎಂದರು.

 ಎಂಎ ಪರೀಕ್ಷೆಯಲ್ಲಿ ಚೆನ್ನಾಗಿ  ಮಾಡಿದ್ದರಿಂದ ಉತ್ತಮ ಅಂಕಗಳು ಬರುತ್ತವೆ ಎಂಬ ನಿರೀಕ್ಷೆಯಿತ್ತು. ಆದರೆ, ಅತ್ಯುನ್ನತ  ಸ್ಥಾನ ಹೊಂದುತೇನೆ  ಅಂದುಕೊಂಡಿರಲಿಲ್ಲ ಎಂದು ನೇತ್ರಾವತಿ ಹರ್ಷ ವ್ಯಕ್ತಪಡಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com