ಹಾವೇರಿ: ಹುತಾತ್ಮ ಯೋಧರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ, ಓರ್ವನ ಬಂಧನ

ಪುಲ್ವಾಮಾದಲ್ಲಿ ಉಗ್ರದಾಳಿಗೆ ಸಿಕ್ಕು ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಏರ್ಪಡಿಸಿದ್ದ ಸಭೆಯಲ್ಲಿ ಪಾಕ್-ಪರ ಘೋಷಣೆ ಕೂಗಿದ್ದ ಆರೋಪದ ಮೇಲೆ ಹಾವೇರಿ ಪೋಲೀಸರು ಓರ್ವನನ್ನು ಬಂಧಿಸಿದ್ದಾರೆ.
ಹಾವೇರಿ: ಹುತಾತ್ಮ ಯೋಧರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ, ಓರ್ವನ ಬಂಧನ
ಹಾವೇರಿ: ಹುತಾತ್ಮ ಯೋಧರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ, ಓರ್ವನ ಬಂಧನ
ಹಾವೇರಿ:  ಪುಲ್ವಾಮಾದಲ್ಲಿ ಉಗ್ರದಾಳಿಗೆ ಸಿಕ್ಕು ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಏರ್ಪಡಿಸಿದ್ದ ಸಭೆಯಲ್ಲಿ ಪಾಕ್-ಪರ ಘೋಷಣೆ ಕೂಗಿದ್ದ ಆರೋಪದ ಮೇಲೆ ಹಾವೇರಿ ಪೋಲೀಸರು ಓರ್ವನನ್ನು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮದಲ್ಲಿ ಸಭೆ ನಡೆಸಲಾಗಿದ್ದ ಸಭೆಯ ವೇಳೆ ಅಹಮದ್ ಅಲಿ ಕರಿಮತ್ತಿಹಳ್ಳಿ (36) ಎನ್ನುವಾತ ಪಾಕ್ ಪರ ಘೋಷಣೆ ಕೂಗಿದ್ದು ಆತನನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತನು ಸಹ ಅದೇದೇವಗಿರಿ ಗ್ರಾಮದ ನಿವಾಸಿಯಾಗಿದ್ದಾನೆ.
ಭಯೋತ್ಪಾದಕರ ದಾಳಿಯಲ್ಲಿ ತಮ್ಮ ಜೀವವನ್ನು ಕಳೆದುಕೊಂಡವ ಯೋಧರ ಸ್ಮರಣಾರ್ಥ ಗ್ರಾಮಸ್ಥರು ಸಭೆ ನಡೆಸಿದ್ದರು. ಅದೇ ವೇಳೆ ಒಂದು ನಿಮಿಷ ಮೌನ ಆಚರಿಸಲು ನಿರ್ಧರಿಸಲಾಗಿದೆ.. ಈ ಸಮಯದಲ್ಲಿ, ಅಹಮದ್ 'ಪಾಕಿಸ್ತಾನ ಜಿಂದಾಬಾದ್'  ಎಂದು ಅನೇಕ ಬಾರಿ ಕೂಗಿದ್ದಾನೆ ಎಂದು ಪೋಲೀಸರು ವಿವರಿಸಿದರು.
ಈ ಅನಿರೀಕ್ಷಿತ ಬೆಳವಣಿಗೆಯಿಂದ ಉದ್ವಿಗ್ನಗೊಂಡ ಮಸ್ಥರು ಆತನನ್ನು ಹೀಯಾಳಿದ್ದಾರೆ.ಅಲ್ಲದೆ ಆತ ಅಲ್ಲಿಂದ ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದಾಗ ಅವನನ್ನು ಹಿಡಿದು ಗ್ರಾಮಸ್ಥರೇ ಪೋಲೀಸರಿಗೆ ಹಸ್ತಾಂತರಿಸಿದ್ದಾರೆ.
ಘಟನೆ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com