ನಕಲಿ ಪಾಸ್ ಪೋರ್ಟ್ಸ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಳು ರೋಹಿಂಗ್ಯಾಗಳ ವಶ

ಭಾರತದ ನಕಲಿ ಪಾಸ್ ಪೋರ್ಟ್ ಹೊಂದಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿ ರೋಹಿಂಗ್ಯಾ ಮುಸ್ಲಿಂರನ್ನು ನಗರ ಅಪರಾಧ ವಿಭಾಗದ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಕೆಐಎ
ಕೆಐಎ

ಬೆಂಗಳೂರು: ಭಾರತದ ನಕಲಿ ಪಾಸ್ ಪೋರ್ಟ್  ಹೊಂದಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿ ರೋಹಿಂಗ್ಯಾ ಮುಸ್ಲಿಂರನ್ನು ನಗರ ಅಪರಾಧ ವಿಭಾಗದ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಆರೋಪಿಗಳನ್ನು ಅಸ್ಕಾ ಬೇಗಂ, ಮೊಹಮ್ಮದ್ ತಾಹಿರ್, ಓಂಕರ್ ಫಾರೂಕ್, ಮೊಹಮ್ಮದ್ ಹಲೇಕ್, ರೆಹಾನಾ ಬೇಗಂ ಹಾಗೂ ಮೊಹಮ್ಮದ್ ಮುಸ್ತಾಪಾ ಎಂದು ಗುರುತಿಸಲಾಗಿದೆ. ಈ ಪೈಕಿ ಆರು ಮಂದಿ ಹೈದ್ರಾಬಾದಿನ ರಂಗರೆಡ್ಡಿ ಜಿಲ್ಲೆಯ ಮಲ್ಲಾ ರೆಡ್ಡಿ ಪಲ್ಲಿ ಗ್ರಾಮದಿಂದ ಬಂದವರಾಗಿದ್ದಾರೆ. ಈ ಮಧ್ಯೆ ರಾಜನಾಥ್ ಮಂಡಲ್  ಕೊಲ್ಕತ್ತಾದವರಾಗಿದ್ದಾರೆ.

ಇವರಿಗೆ ನಕಲಿ ಪಾಸ್ ಪೋರ್ಟ್ ಪಡೆಯಲು ನೆರವು ನೀಡಿದ ಅಬ್ದಲ್ ಅಲೀಮ್ ಮತ್ತಿತರ ಇಬ್ಬರು ಟ್ರಾವೆಲ್ ಏಜೆಂಟ್ ಗಳನ್ನು  ಕೂಡಾ ಬಂಧಿಸಲಾಗಿದೆ.

ನಕಲಿ ಪಾಸ್ ಪೋರ್ಟ್ ಬಗ್ಗೆ ಸಣ್ಣ ಸುಳಿವು ದೊರೆತ ನಂತರ ವಲಸೆಗಾರ ಅಧಿಕಾರ ನೆರವಿನಿಂದ  ವಿಶೇಷ ತಂಡವೊಂದರನ್ನು ರಚಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಯಾನ್ಮಾರ್ ನಿಂದ ಅಕ್ರಮವಾಗಿ ಪಶ್ಟಿಮ ಬಂಗಾಳಕ್ಕೆ ವಲಸೆ ಬಂದಿರುವ ರೋಹಿಂಗ್ಯಾಗಳು, ಹೈದ್ರಾಬಾದಿನಲ್ಲಿ ಶಿಬಿರದಲ್ಲಿ ತಂಗಲು ನಿರಾಕರಿಸಿದ್ದಾರೆ. ನಂತರ ಏಜೆಂಟ್ ಗಳ ಸಂಪರ್ಕದೊಂದಿಗೆ ನಕಲಿ  ಮತದಾರರ ಕಾರ್ಡ್ ಮತ್ತಿತರ ದಾಖಲೆಗಳನ್ನು ಹೊಂದಿದ್ದಾರೆ.

ಬಂಧನಕ್ಕೊಳಗಾಗಿರುವ ಆಸ್ಮಾ ಅವರ ಸಂಬಂಧಿಯೊಬ್ಬರು ಇತ್ತೀಚಿಗೆ ಸಂಪರ್ಕಕ್ಕೆ ಸಿಕ್ಕಿ ಕೌಲಾಲಂಪುರಕ್ಕೆ ಬಂದರೆ ಉತ್ತಮ ಜೀವನ ನಡೆಸಬಹುದೆಂದು ಹೇಳಿದ್ದಾರೆ. ಈ ವಿಷಯವನ್ನು ಇತರ ರೋಹಿಂಗ್ಯಾಗಳು ಹಂಚಿಕೊಂಡಿದ್ದು, ಅಬ್ದುಲ್ ಅಲೀಮ್ ನಿಂದ ಪಾಸ್ ಪೋರ್ಟ್ ಪಡೆದುಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com