ಪುಲ್ವಾಮಾ ದಾಳಿಗೆ ಎದೆಗುಂದದ ಯುವಕರು: ಸೇನೆ ಸೇರಲು ಆಕಾಂಕ್ಷಿಗಳ ಅತ್ಯುತ್ಸಾಹ!

ಪುಲ್ವಾಮಾ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾದರೂ ಹತಾಶರಾಗದ ಆರ್ಥಿಕವಾಗಿ ಹಿಂದುಳಿದಿರುವ ಸಾವಿರಾರು ಯುವಕರು ಇಲ್ಲಿ ನಡೆದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಂಡರು.
ಯೋಧ ಹುದ್ದೆಯ ಆಕಾಂಕ್ಷಿಗಳು
ಯೋಧ ಹುದ್ದೆಯ ಆಕಾಂಕ್ಷಿಗಳು

ಬೆಳಗಾವಿ: ಪುಲ್ವಾಮಾ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾದರೂ ಹತಾಶರಾಗದ  ಆರ್ಥಿಕವಾಗಿ ಹಿಂದುಳಿದಿರುವ ಸಾವಿರಾರು ಯುವಕರು ಇಲ್ಲಿ ನಡೆದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಂಡರು.

ಸೂಕ್ತ ದರದಲ್ಲಿ ಹೋಟೆಲ್, ಲಾಡ್ಜ್ ಗಳು ದೊರೆಯದ ಕಾರಣ ಶುಕ್ರವಾರ ರಾತ್ರಿ ಪುಟ್ ಬಾತ್ ಗಳ ಮೇಲೆಯೇ ಮಲಗಿ ಶನಿವಾರ ಬೆಳಗ್ಗೆ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಗಡಿಯಲ್ಲಿ ದೇಶ ಕಾಯಲು ನಿರ್ಧರಿಸಿದ್ದು, ಒಂದು ವೇಳೆ ಸೇನೆಗೆ ನೇಮಕವಾದರೆ ಶತ್ರುಗಳ ವಿರುದ್ಧ ಹೋರಾಡುವುದಾಗಿ ಆಕಾಂಕ್ಷಿ ಅಭ್ಯರ್ಥಿಯೊಬ್ಬರು ಹೇಳಿದ್ದರು. ಭಾರತೀಯ ಸೇನೆಯ ಭಾಗವಾಗಿ ದೇಶ ಸೇವೆ ಮಾಡಲು ಸಂಬಂಧಿತ ಪ್ರಾಧಿಕಾರ ಅವಕಾಶ ನೀಡುವಂತೆ ಅವರು ಒತ್ತಾಯಿಸಿದರು.

ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಗೋವಾ, ರಾಜಸ್ತಾನದಿಂದಲೂ ಆಕಾಂಕ್ಷಿ ಅಭ್ಯರ್ಥಿಗಳು ಬಂದಿದ್ದರು.

ಮಹರ್ ರೆಜಿಮೆಂಟಿನ 115 ಇನ್ ಪ್ಯಾಂಟ್ರಿ ಬ್ಯಾಟಲಿಯನ್ ನಿಂದ ಈ ನೇಮಕಾತಿ ಆಯೋಜಿಸಲಾಗಿತ್ತು. ದೇಶ ಸೇವೆಗೆ ಉತ್ಸುಕವಾಗಿದ್ದು, ತಮ್ಮ ಉತ್ಸಾಹ ಹೆಚ್ಚಾಗಿದೆ ಎಂದು ಮಹಾರಾಷ್ಟ್ರದಿಂದ ಬಂದಿದ್ದ ಶಶಿಧರ್ ತಿಳಿಸಿದರು.
ಒಟ್ಟಾರೇ 64 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದ್ದು, ಈ ಪೈಕಿ 53 ಪ್ರಮುಖ ಸೈನಿಕ ಹುದ್ದೆಗಳಿಗೆ ಸೇರಿದ್ದಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com