ಚಿತ್ರ ವರದಿ: ಧರ್ಮಸ್ಥಳದಲ್ಲಿ ಮಹಾಮಜ್ಜನ, ರಂಗುಗಳಲ್ಲಿ ಕಂಗೊಳಿಸಿದ ವೈರಾಗ್ಯ ಮೂರ್ತಿ

ನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಂಭ್ರಮ ಪ್ರಖ್ಯಾತ ಧಾರ್ಮಿಕ ತಾಣ ಧರ್ಮಸ್ಥಳದಲ್ಲಿ ಮನೆಮ್ಮಾಡಿದ್ದು ದೇಶಾದ್ಯಂತದ....
ಧರ್ಮಸ್ಥಳದಲ್ಲಿ ಮಹಾಮಜ್ಜನ, ರಂಗುಗಳಲ್ಲಿ ಕಂಗೊಳಿಸಿದ ವೈರಾಗ್ಯ ಮೂರ್ತಿ
ಧರ್ಮಸ್ಥಳದಲ್ಲಿ ಮಹಾಮಜ್ಜನ, ರಂಗುಗಳಲ್ಲಿ ಕಂಗೊಳಿಸಿದ ವೈರಾಗ್ಯ ಮೂರ್ತಿ
ಧರ್ಮಸ್ಥಳ: ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಂಭ್ರಮ ಪ್ರಖ್ಯಾತ ಧಾರ್ಮಿಕ ತಾಣ ಧರ್ಮಸ್ಥಳದಲ್ಲಿ ಮನೆಮ್ಮಾಡಿದ್ದು ದೇಶಾದ್ಯಂತದ  ಸಾವಿರಾರು ಭಕ್ತರು ಶನಿವಾರ ಇಲ್ಲಿ ರತ್ನಗಿರಿ ಬೆಟ್ಟದ ಮೇಲಿನ ಬಾಹುಬಲಿಯ ಮಹಾಮಜ್ಜನಕ್ಕೆ ಸಾಕ್ಷಿಯಾಗಿದ್ದರು.
ಳು ದಿನಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಗಳ ನಂತರ ಶನಿವಾರದಿಂದ ಮಹಾಮಜ್ಜನ ಕಾರ್ಯಕ್ರ್ಮ ಪ್ರಾರಂಭಗೊಂಡಿದ್ದು ಭಾನುವಾರ, ಸೋಮವಾರಗಳವರೆಗೂ ಮುಂದುವರಿಯಲಿದೆ.
ಬಾಹುಬಲಿ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಾ. ವಿಏಂದ್ರ ಹೆಗ್ಗಡೆ ಹಾಗೂ ಕುಟುಂಬ ವತಿಯಿಂದ ಮೊದಲ ದಿನದ ಅಭಿಷೇಕ ನೆರವೇರಿದೆ.ಒಂಬತ್ತು ದ್ರವ್ಯಗಳನ್ನು ಬಳಸಿ ಮಹಾಮಸ್ತಕಾಭಿಷೇಕ ಮಾಡಲಾಗಿದ್ದು ಬಾಹುಬಲಿ ಹಲವು ರಂಗುಗಳಿಂದ ಕಂಗೊಳಿಸಿದನು.
ಜೈನ ಮುನಿಗಳು ಮತ್ತು ಮಾತಾಜಿಗಳು ಹೊರತಾಗಿ  ಸುಮಾರು 100 ಸಂತರು 1,008 ಕಲಾಶಗಳಿಂದ ಬಾಹುಬಲಿ ಜಲಾಭಿಷೇಕದಲ್ಲಿ ಭಾಗವಹಿಸಿದ್ದರು.ಬೆಳಗ್ಗೆ 8.45ಕ್ಕೆ ಪರಿಶುದ್ಧ ಜಲಾಭಿಷೇಕದೊಡನೆ ಮಹಾಮಜ್ಜನ ಪ್ರಾರಂಭವಾಗಿತ್ತು. ಆ ನಂತರ ಎಳನೀರುಉ, ಇಕ್ಷ ುರಸ, ಕ್ಷೀರ, ಕಲ್ಕಚೂರ್ಣ, ಅರಿಶಿಣ ,ಕಷಾಯ , ಚತುಷ್ಕೋನ , ಕಾಶ್ಮೀರ ಕೇಸರಿ, ಶ್ರೀಗಂಧ, ಚಂದನ, ಅಷ್ಟಗಂಧ, ಕನಕಾಭಿಷೇಕಗಳು ನಡೆದು ಬೃಹತ್ ಹಾರವನ್ನು ಬಾಹುಬಲಿಗೆ ಹಾಕಲಾಗಿತ್ತು.
ರತ್ನಗಿರಿ ಬೆಟ್ಟದಲ್ಲಿ ಸಾವಿರಾರು ಭಕ್ತ ಜನರು ನೆರೆದಿದ್ದರೂ ಎಲ್ಲಿಯೂ ಗೊಂದಲ, ಗಲಾಟೆಗಳಿಲ್ಲದೆ ಶಾಂತಿಯುತವಾಗಿ ಮೊದಲ ದಿನದ ಮಸ್ತಕಾಭಿಷೇಕ ಸಂಪನ್ನವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com