ಬೆಂಗಳೂರು: ಪಿಜಿ ಮಾಲೀಕನಿಂದ ಯುವತಿ ಮೇಲೆ ಹಲ್ಲೆ,ದೂರು ದಾಖಲು

ಅಸ್ಸಾಂನಿಂದ ಬಂದಿದ್ದ 28 ವರ್ಷದ ಯುವತಿ ಮೇಲೆ ಪಿಜಿ ಮಾಲೀಕ ಹಾಗೂ ಅಡುಗೆ ಭಟ್ಟ ಹಾಗೂ ಆತನ ತಾಯಿ ಸೇರಿ ಹಲ್ಲೆ ನಡೆಸಿ ಮಧ್ಯರಾತ್ರಿಯಲ್ಲಿ ಪಿಜಿಯಿಂದ ಹೊರ ಹಾಕಿರುವ ಘಟನೆ ವೈಟ್ ಪೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಸ್ಸಾಂನಿಂದ ಬಂದಿದ್ದ 28 ವರ್ಷದ ಯುವತಿ ಮೇಲೆ ಪಿಜಿ ಮಾಲೀಕ ಹಾಗೂ ಅಡುಗೆ ಭಟ್ಟ ಹಾಗೂ ಆತನ ತಾಯಿ ಸೇರಿ ಹಲ್ಲೆ  ನಡೆಸಿ ಮಧ್ಯರಾತ್ರಿಯಲ್ಲಿ ಪಿಜಿಯಿಂದ ಹೊರ ಹಾಕಿರುವ ಘಟನೆ  ವೈಟ್ ಪೀಲ್ಡ್  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಠಡಿಯಲ್ಲಿ ಆಕೆ ಮದ್ಯಪಾನ, ಧೂಮಪಾನ ಮಾಡುತ್ತಾಳೆಂದು ಆಕೆಯೊಂದಿಗಿದ್ದ ಸ್ನೇಹಿತೆ ತಪ್ಪು ದೂರು ನೀಡಿದ್ದರಿಂದ ಪಿಜಿ ಮಾಲೀಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಜನವರಿ 28 ರಂದು ಪಿಜಿ ಮಾಲೀಕ ವೆಂಕಟೇಶ್ , ಪುರುಷ ಅಡುಗೆ ಭಟ್ಟ ಹಾಗೂ ವೆಂಕಟೇಶ್ ತಾಯಿ ತನ್ನ ಮೇಲೆ ಹಲ್ಲೆ ನಡೆಸಿ ಪಿಜಿಯಿಂದ ಮಧ್ಯರಾತ್ರಿಯಲ್ಲಿ ಹೊರಹಾಕಿದ್ದಾರೆ. ಇಲ್ಲಿ ನಾನು ಉಳಿಯಲು ಯಾವುದೇ ಸ್ನೇಹಿತರು ಅಥವಾ ಬಂದುಗಳಿಲ್ಲ ಎಂದು ಸಂತ್ರಸ್ತೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಆರೋಪಿ ವಿರುದ್ಧ ವೈಟ್ ಪೀಲ್ಡ್ ಪೊಲೀಸರು  ಫೆ.11 ರಂದು ಪ್ರಕರಣ ದಾಖಲಿಸಿದ್ದಾರೆ. ಆದಾಗ್ಯೂ, ಈವರೆಗೂ ಯಾರನ್ನೂ ಬಂಧಿಸಿಲ್ಲ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಂತ್ರಸ್ತೆ, ಕೊಠಡಿಗೆ ಹೋಗಿ ಪುರಾವೆಗಳಿದ್ದರೆ ಹುಡುಕುವಂತೆ ಪಿಜಿ ಮಾಲೀಕರಿಗೆ ಹೇಳಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದ ಆತ ನನ್ನನ್ನು ಬೈದು ಹಲ್ಲೆ ನಡೆಸಿದ್ದಾನೆ.
ಪಿಜಿಯಿಂದ ಹೊರಹಾಕುತ್ತಿದ್ದರು ನೆರೆಹೊರೆಯವರು ಸುಮ್ಮನೆ ನೋಡುತ್ತಿದ್ದರು. ನಿರುದ್ಯೋಗಿಯಾಗಿದ್ದು, ಎರಡು ತಿಂಗಳ ಬಾಡಿಗೆ ಕೊಡಲು ಸ್ವಲ್ವ ದಿನ ಕೇಳಿಕೊಂಡಿದ್ದರಿಂದ ಕೋಪಗೊಂಡು ಪಿಜಿ ಮಾಲೀಕ ಈ ರೀತಿ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com