ಆಟೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಲೋಕಸಭೆ ಚುನಾವಣೆ ಮುಗಿಯುವವರೆಗೂ ದರ ಏರಿಕೆ ಇಲ್ಲ!

ಪ್ರಯಾಣ ಶುಲ್ಕ ಏರಿಸುವಂತೆ ಆಟೋ ಚಾಲಕರ ಸಂಘ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಯಾಣ ಶುಲ್ಕ ಏರಿಸುವಂತೆ ಆಟೋ ಚಾಲಕರ ಸಂಘ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ಶುಲ್ಕ ಏರಿಕೆ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ,
ಲೋಕಸಭೆ ಚುನಾವಣೆ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಆಟೋ ಪ್ರಯಾಣ ಶುಲ್ಕ ಏರಿಸಲು ಸಾಧ್ಯವಿಲ್ಲ ಎಂದು ವಿವಿಧ ಆಟೋ ಸಂಘಟನೆಗಳಿಗೆ ತಿಳಿಸಲಾಗಿದೆ. ಮೇ ತಿಂಗಳ ಒಳಗೆ ಯಾವುದೇ ಕಾರಣಕ್ಕೂ ಆಟೋ ಶುಲ್ಕದಲ್ಲಿ ಏರಿಕೆ ಇಲ್ಲ ಎಂದು ತಿಳಿಸಲಾಗಿದೆ.
ಶೀಘ್ರವೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ, ಈ ಕಾರಣಕ್ಕಾಗಿ ದರ ಏರಿಕೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ, ಹಲವು ಅಂಕಿ ಅಂಶಗಳನ್ನು ಆಘಧಾರವಾಗಿಸಿಕೊಂಡು ದರ ನಿಗಧಿ ಮಾಡಲಾಗುತ್ತದೆ, ವಾಹನದ ಬೆಲೆ, ಇಂಧನ, ಚಾಲಕನ ಕೂಲಿ, ನಿರ್ವಹಣೆ ಸೇರಿದಂತೆ ಹಲವು ಮಾನದಂಡಗಳ ಆಧರಿಸಿ ದರ ನಿಗದಿ ಮಾಡಲಾಗುವುದು ಎಂದು ತಿಳಿದು ಬಂದಿದ.
ಸದ್ಯ ಆಟೋ ದರ ಕನ್ಷ್ಠ 25 ರು ಇದೆ, ಪ್ರತಿ ಕಿಮೀ ಗೆ 13 ರು  ಇದೆ. ಹೀಗಾಗಿ ಕನಿಷ್ಠ ದರ 30 ರು ಏರಿಸಿ, ಅದಾದ ನಂತರ ಪ್ರತಿ ಕಿಮೀ ಗೆ 15 ರು ಏರಿಸುವತೆ ಮನವಿ ಸಲ್ಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com