ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಯಲ್ಲಿ 25 ಲಕ್ಷ ಭಕ್ತಾದಿಗಳು ಬಾಗಿ

ಮಂಗಳವಾರ ನಡೆದ ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಸುಮಾರು 25 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದರು....

Published: 20th February 2019 12:00 PM  |   Last Updated: 20th February 2019 12:14 PM   |  A+A-


farmers  arrived in bullock carts

ಎತ್ತಿನ ಗಾಡಿಯಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರು

Posted By : SD SD
Source : The New Indian Express
ಬೆಳಗಾವಿ: ಮಂಗಳವಾರ ನಡೆದ ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಸುಮಾರು 25 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದರು.

ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಿಂದ ಭಕ್ತಾದಿಗಳು ಆಗಮಿಸಿದ್ದರು. ಹೆಚ್ಚಿನ ಪ್ರಮಾಣದಲ್ಲಿ ರೈತರು ಎತ್ತಿನ ಗಾಡಿ ಮೂಲಕ ಆಗಮಿಸಿದ್ದರು.

ಬೆಳಗಾವಿ, ಬಾಗಲಕೋಟೆ,ಧಾರವಾಡ, ಸವದತ್ತಿ, ಗದಗ ಸೇರಿದಂತೆ ಹಲವು ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ,  ಈ ಭಾಗದ ಜನರು ಎತ್ತಿನಗಾಡಿಯಲ್ಲಿ ಬರುವ ಪದ್ಧತಿ ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಸುಮಾರು 70 ಸಾವಿರ ಎತ್ತಿನ ಗಾಡಿಗಳು ಸವದತ್ತಿಗೆ ಆಗಮಿಸಿದ್ದವು. 

ಭಕ್ತಾಧಿಗಳ ಸೌಕರ್ಯಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿತ್ತು ಎಂದು ಜಾತ್ರೆಗೆ ಆಗಮಿಸಿದ್ದ ಭಕ್ತರು ತಿಳಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp