ಸರ್ಕಾರಿ ವಿಶ್ವವಿದ್ಯಾಲಯಗಳಿಂದ ಕೇವಲ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ನಿರ್ಧಾರ

ರಾಜ್ಯ ಸರ್ಕಾರ ನಡೆಸುವ ವಿಶ್ವ ವಿದ್ಯಾಲಯಗಳಿಂದ ಪ್ರತಿ ವರ್ಷ ಕೇವಲ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ರಾಜ್ಯ ಪಾಲರು ಹಾಗೂ ವಿವಿಗಳ ...
ವಜೂಬಾಯಿ ವಾಲಾ
ವಜೂಬಾಯಿ ವಾಲಾ
ಬೆಂಗಳೂರು: ರಾಜ್ಯ ಸರ್ಕಾರ ನಡೆಸುವ ವಿಶ್ವ ವಿದ್ಯಾಲಯಗಳಿಂದ ಪ್ರತಿ ವರ್ಷ ಕೇವಲ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ರಾಜ್ಯ ಪಾಲರು ಹಾಗೂ ವಿವಿಗಳ ಉಪಕುಲಪತಿಗಳು ನಿರ್ಧರಿಸಿದ್ದಾರೆ.
ಗೌರವ ಡಾಕ್ಟರೇಟ್ ಪ್ರಶಸ್ತಿಗಳು ರಾಜಕೀಯಗೊಳ್ಳುತ್ತಿದ್ದು, ಪಕ್ಷಪಾತ ನಿಲುವನ್ನು ನಿರ್ಬಂಧಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜಭವನ ಮೂಲಗಳು ತಿಳಿಸಿವೆ.
ಕೆಲವು ವಿವಿಗಳು ಗೌರವಕ್ಕೆ ಅನರ್ಹರಾಗಿದ್ದವರ ಹೆಸರನ್ನು ಶಿಫಾರಸು ಮಾಡುತ್ತಾರೆ, ಒಂದು ವೇಳೆ  ಗೌರವ ಡಾಕ್ಟರೇಟ್ ಗೆ ಎರಡಕ್ಕಿಂತ ಹೆಚ್ಚಿನ ಹೆಸರುಗಳನ್ನು ಶಿಫಾರಸು ಮಾಡಿದರೇ ಮುಂದಿನ ನಿರ್ಧಾರವನ್ನು  ರಾಜ್ಯಪಾಲರೇ ಬಗೆಹರಿಸುತ್ತಾರೆ ಎಂದು ತಿಳಿದು ಬಂದಿದೆ.,
ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾನಿಲಯ 7 ಹೆಸರುಗಳನ್ನು ಗೌರವ ಡಾಕ್ಟರೇಟ್ ಗೆ ಪ್ರಸ್ತಾಪಿಸಿತ್ತು, ರಾಜ್ಯ ಪಾಲರು ಅದರಲ್ಲಿ ಕೇವಲ ಒಬ್ಬರಿಗೆ ಶಿಪಾರಸು ಮಾಡಿದರು. ವಿಟಿಯು ಶಿಫಾರಸು ಮಾಡಿದ್ದ 7 ಮಂದಿಯಲ್ಲಿ  ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳ ವಿವಾದಾತ್ಮಕ ವ್ಸಕ್ತಿಯ ಹೆಸರಿತ್ತು, ಬೆಂಗಳೂರು ವಿವಿ ಇನ್ನೂ ಪಟ್ಟಿ ಕಳಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com