ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಸಿಎಂ ಕುಮಾರಸ್ವಾಮಿ ಕರೆ

ರಕ್ಷಣಾ ವಲಯಕ್ಕೆ ಏರೋ ಇಂಡಿಯಾ ಪ್ರದರ್ಶನ ಮಹತ್ವದ್ದಾಗಿದೆ. ಕರ್ನಾಟಕ ಆರ್ಥಿಕ ಅಭಿವೃದ್ಧಿಯಲ್ಲಿ...
ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ರಕ್ಷಣಾ ವಲಯಕ್ಕೆ ಏರೋ ಇಂಡಿಯಾ ಪ್ರದರ್ಶನ ಮಹತ್ವದ್ದಾಗಿದೆ. ಕರ್ನಾಟಕ ಆರ್ಥಿಕ ಅಭಿವೃದ್ಧಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಉದ್ಯೋಗಾವಕಾಶಗಳ ಸೃಷ್ಟಿ, ಮಧ್ಯಮವರ್ಗದ ಏಳಿಗೆಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಹೂಡಿಕೆ ಆಕರ್ಷಿಸಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಇತ್ತೀಚೆಗೆ ಬೆಂಗಳೂರು ನಂಬರ್ 1 ಡಿಜಿಟಲ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಿನ್ನೆ ತಾಲೀಮು ವೇಳೆ ನಿಧನರಾದ ಪೈಲಟ್ ಸಾಹಿಲ್ ಗಾಂಧಿಗೆ ಸಂತಾಪ ಸೂಚಿಸಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2019 ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಸಿಎಂ ಕುಮಾರಸ್ವಾಮಿ ನಮ್ಮ ರಾಜ್ಯದಲ್ಲಿ ಆವಿಷ್ಕಾರಗಳು, ನೂತನ ಉದ್ಯಮಗಳಿಗೆ ಉತ್ತೇಜನ ನೀಡಲಾಗಿದೆ. ಅದಕ್ಕೆ ಬೇಕಾದ ಅವಶ್ಯಕ ಮೂಲಭೂತ ಸೌಕರ್ಯಗಳು ಉತ್ತಮವಾಗಿದೆ. ಹೆಚ್ಚಿನ ಜನ ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಾರೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ವೈಮಾನಿಕ ಉದ್ಯಮಕ್ಕೆ ಅವಶ್ಯವಿರುವ ತಯಾರಿಕಾ ಘಟಕಗಳಿವೆ. ಕರ್ನಾಟಕ ಸರ್ಕಾರ ಮುಂದಿನ 5 ದಿನಗಳಲ್ಲಿ 50ಕ್ಕೂ ಹೆಚ್ಚು ಬಿಟುಬಿ ಸಭೆಗಳನ್ನು ನಡೆಸಲಿದೆ ಎಂದರು.
ಏರೋಸ್ಪೇಸ್ ಕೈಗಾರಿಕೋದ್ಯಮಕ್ಕೆ ಕರ್ನಾಟಕದಲ್ಲಿ ಉತ್ತಮ ಅವಕಾಶವಿದೆ ಎಂದು ರಾಜ್ಯಕ್ಕೆ ಹೂಡಿಕೆದಾರರನ್ನು ಸಿಎಂ ಕುಮಾರಸ್ವಾಮಿ ಆಕರ್ಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com