ಮೇಕೆದಾಟು ಯೋಜನೆ: ಸುಪ್ರೀಂ ವಿಚಾರಣೆ 3 ವಾರಗಳ ಕಾಲ ಮುಂದೂಡಿಕೆ

ಕರ್ನಾಟಕದ ಮಹತ್ವದ ಕುಡಿಯುವ ನೀರು ಯೋಜನೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಕುರಿತು ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರು ವಾರಗಳ ಕಾಲ ಮುಂದೂಡಿದೆ.
ಮೇಕೆದಾಟು ಯೋಜನೆ: ಸುಪ್ರೀಂ ವಿಚಾರಣೆ 3 ವಾರಗಳ ಕಾಲ ಮುಂದೂಡಿಕೆ
ಮೇಕೆದಾಟು ಯೋಜನೆ: ಸುಪ್ರೀಂ ವಿಚಾರಣೆ 3 ವಾರಗಳ ಕಾಲ ಮುಂದೂಡಿಕೆ
ನವದೆಹಲಿ ಕರ್ನಾಟಕದ ಮಹತ್ವದ ಕುಡಿಯುವ ನೀರು ಯೋಜನೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಕುರಿತು ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರು ವಾರಗಳ ಕಾಲ ಮುಂದೂಡಿದೆ.
ಕರ್ನಾಟಕ-ತಮಿಳುನಾಡು ನಡುವೆ ಕಾನೂನು ಹೋರಾಟಕ್ಕೆ ಕಾರಣವಾಗಿರುವ ಈ ಯೋಜನೆಯುನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ವಿವರವನ್ನು ಕುರಿತು ಬುಧವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ದ್ವಿಸದಸ್ಯ ಪೀಠ  ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿ ಆದೇಶಿಸಿದೆ.
ಯೋಜನೆಗೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ನೀಡಿರುವ ವಿವರಗಳಿಗೆ ಕರ್ನಾಟಕದಿಂದ ಉತರವನ್ನು ನ್ಯಾಯಾಲಯ ಬಯಸಿದೆ. ಇದಕ್ಕೆ ಉತ್ತರ ನೀಡಲು ತನಗೆ ಕಾಲಾವಕಾಶ  ಬೇಕು ಎಂದು ರಾಜ್ಯ ಸರ್ಕಾರ ಕೇಳಿದ ಹಿನ್ನೆಲೆಯಲ್ಲಿ ಕೋರ್ಟ್ ಮುಂದಿನ ವಿಚಾರಣೆಯನ್ನು ಮೂರು ವಾರಗಳ ಕಾಲ ಕಾಲಾವಕಾಶ ನೀಡಿದೆ.
ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಅಲ್ಲದೆ ಯೋಜನಾ ವಿವರ ಕುರಿತ ಸವಿವರ ವರದಿ (ಡಿಪಿಆರ್) ಸಲ್ಲಿಸುವಂತೆಯೂ ಸೂಚಿಸಿದೆ.
ತಮಿಳುನಾಡು ಸರ್ಕಾರ ಕರ್ನಾಟಕಕ್ದ ಈ ಯೋಜನೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದಾಗ ಅದರ ಅರ್ಜಿಯನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್ ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಕೆಗೆ ಸೂಚಿಸಿತ್ತು. ಇದರಂತೆ ತಮಿಳುನಾಡು ಈ ದಿನ ಅಫಿಡವಿಟ್ ಸಲ್ಲಿಕೆ ಮಾಡಿದೆ. ಇದೀಗ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಮೂರು ವಾರಗಳ ಕಾಲಾವಕಾಶ ನೀಡಿದ್ದು ಇನ್ನು ಮೂರು ವಾರಗಳ ಬಳಿಕ ವಿಚಾರಣೆ ಮತ್ತೆ ಮುಂದುವರಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com