ಬೆಂಗಳೂರು: ನಿವೇಶನದ ಆಸೆಗೆ ನಾದಿನಿಯನ್ನೇ ಕೊಂದ!

: ನಿವೇಶನನದ ಆಸೆಗಾಗಾಗಿ ನಾದಿನಿಯನ್ನೇ ಕೊಂದಿದ್ದ ಭಾವ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ.

Published: 20th February 2019 12:00 PM  |   Last Updated: 20th February 2019 05:00 AM   |  A+A-


Two arrested including brother in law  fo killing a woman in Bengaluru

ಬೆಂಗಳೂರು: ನಿವೇಶನದ ಆಸೆಗೆ ನಾದಿನಿಯನ್ನೇ ಕೊಂದ!

Posted By : RHN RHN
Source : Online Desk
ಬೆಂಗಳೂರು: ನಿವೇಶನನದ ಆಸೆಗಾಗಾಗಿ ನಾದಿನಿಯನ್ನೇ ಕೊಂದಿದ್ದ ಭಾವ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ.

ವಿವೇಕ್ ಅಗರ್ವಾಲ್, ಹಾಗೂ ಥಾಯ್ ಹೇಲ್ ಎಂಬುವವರನ್ನು ಬೆಂಗಳೂರು ಕೆಂಗೇರಿ ಪೋಲೀಸರು ಬಂಧಿಸಿದ್ದಾರೆ. ಫೆ. 18ರಂದು ವಿವೇಕ್ ತನ್ನ ನಾದಿನಿ ಅನುಶಾಳನ್ನು ಹತ್ಯೆ ಮಾಡಿದ್ದನು. 

ಬಿಎಚ್ ಇಎಲ್ ಉದ್ಯೋಗಿಯಾಗಿದ್ದ ಅನುಷಾರನ್ನು ಕುತ್ತಿಗೆಗೆ ಹಗ್ಗ ಬಿಗಿದು ಕೊಲ್ಲಲಾಗಿತ್ತು. ವಿವೇಕ್ ಹಾಗೂ ಆತನ ಸ್ನೇಹಿತ ಹೇಲ್ ಸೇರಿ ಕೃತ್ಯ ನಡೆಸಿದ್ದು ಘಟನೆ ಬಳಿಕ ಇಬ್ಬರೂ ಪರಾರಿಯಾಗಿದ್ದರು. 
ಕೊಲೆ ಪ್ರಕರಣ ದಾಖಲ್ಲಿಸಿಕೊಂಡಿದ್ದ ಪೋಲೀಸರು ಬುಧವಾರ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸಿದ್ದ ವಿವೇಕ್ ತನ್ನ ನಾದಿನಿ ಅನುಶಾ ಬಳಿ ಹಣ ಮತ್ತು ಬಿಡದಿ ಸಮೀಪದಲ್ಲಿದ್ದ ಮನೆ ತನಗೆ ನೀಡುವಂತೆ ಕೇಳಿದ್ದನು.ಇದಕ್ಕೆ ಆಕೆ ನಿರಾಕರಿಸಿದ್ದಾಳೆ. ಆದರೆ ಆ ವಿಚಾರವಾಗಿ ವಿವೇಕ್  ಆಗಾಗಾ ಅವಳನ್ನು ಪೀಡಿಸುತ್ತಿದ್ದ ಎಂದು ಪೋಲೀಸರು ತಿಳಿಸಿದ್ದಾರೆ. ಫೆ 15ರಂದು ವಿವೇಕ್ ಬಾರ್ ನಲಿ ಕುಳಿತು ಕುಡಿಯುತ್ತಿದ್ದಾಗ ಥಾಯ್ ಹೇಲ್ ಪರಿಚಯವಾಗಿತ್ತು.ಅವನಿಗೆ ಸಹ ಮದ್ಯಪಾನ ಮಾಡಿಸಿದ ಆರೋಪಿ ಆತನನ್ನು "ಮನೆ ಬಳಿ ಕೆಲಸವಿದೆ " ಎಂದು ಹೇಳಿ ಅನುಶಾಳ ಮನೆಗೆ ಕರೆತಂದಿದ್ದಾನೆ. 

ಅನುಶಾ  ಸನತ್‍ನನ್ನು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದಳು.ಕೆಂಗೇರಿಯ ಸನ್ ಸಿಟಿ ಬಳಿ ಮನೆಯಲ್ಲಿ ದಂಪತಿಗಳು ವಾಸವಿದ್ದರು. ತನಗೆ ಮನೆ  ನಿಡದ ನಾದಿನಿಯ ಮೇಲೆ ಕ್ರೋಧಗೊಂಡ ವಿವೇಕ್ ಫೆ. 18ರಂದು ಆಕೆಯನ್ನು ತನ್ನ ಸ್ನೇಹಿತ ಥಾಯ್ ಹೇಲ್ ಜತೆ ಸೇರಿ ಕೊಂದಿದ್ದಾನೆ.  

ಅಂದೂ ಸಹ ಆಕೆ ಕೆಲಸಕ್ಕೆ ತೆರಳಿರಬಹುದೆಂದು ಭಾವಿಸಿದ್ದ ಅವಳ ಪೋಷಕರಿಗೆ ಆಕೆ ರಾತ್ರಿಯಾದರೂ ಕರೆ ಸ್ವೀಕರಿಸದೆ ಹೋದದ್ದು ಕಂಡು ಗಾಬರಿಯಾಗಿತ್ತು.ಅದಾಗ ಅವರು ಪತಿ ಸನತ್ ಗೆ ವಿಚಾರ ತಿಳಿಸಿದ್ದಾರೆ. ಸನತ್ ತಕ್ಷಣ ಮನೆಗೆ ಧಾವಿಸಿ ಬೀಗ ಒಡೆದು ನೋಡಿದಾಗ ಪತ್ನಿ ಮೃತಪಟ್ಟಿರುವುದು ತಿಳಿದಿದೆ.
Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp