ರಾತ್ರೋ ರಾತ್ರಿ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ!

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ರಾತ್ರೋ ರಾತ್ರಿ ಹಲವು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ರಾತ್ರೋ ರಾತ್ರಿ ಹಲವು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ತುಷಾರ್ ಗಿರಿನಾಥ್  ಅವರನ್ನು ಬೆಳಗಾವಿ ವಲಯ ಪ್ರಾದೇಶಿಕ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ  ಬಿಡಬ್ಲ್ಯುಎಸ್ಎಸ್ ಬಿ ಅಧ್ಯಕ್ಷರಾಗಿಯೂ ತುಷಾರ್ ಗಿರಿನಾಥ್ ಮುಂದುವರಿಯಲಿದ್ದಾರೆ. ಎಸ್.ಬಿ.ಶೆಟ್ಟಣ್ಣನವರ್ ಅವರನ್ನು ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ ಎಂಡಿಯಾಗಿ ನೇಮಕ ಮಾಡಲಾಗಿದೆ.

ಮಹತ್ವದ ಆದೇಶ: ಡಾ.ಬಗದಿ ಗೌತಮ್ - ಚಿಕ್ಕಮಗಳೂರು ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎಸ್ ಎಸ್ ನಕುಲ್- ಐಟಿ, ಬಿಟಿ ಬೆಂಗಳೂರು ನಿರ್ದೇಶಕರು, ಎಂ.ಕೆ.ಶ್ರೀರಂಗಯ್ಯ-ಆಯುಕ್ತ, ಉದ್ಯಮಶೀಲತೆ ಮತ್ತು ಜೀವನೋಪಾಯ ವಿಭಾಗ, ಜಿ.ಎನ್.ಶಿವಮೂರ್ತಿ-ದಾವಣಗೆರೆ ಜಿಲ್ಲಾಧಿಕಾರಿ, ಎಸ್.ಅಶ್ವಥಿ- ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸಿಇಒ, ಜಿಆರ್ ಜೆ ದಿವ್ಯ ಪ್ರಭು- ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ  ಆಯುಕ್ತ, ಎಚ್.ಬಸವರಾಜೇಂದ್ರ, ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ, ಜಿಸಿ ವೃಷಭೇಂದ್ರ ಮೂರ್ತಿ- ನಿರ್ದೇಶಕರು, ಎಂಎಸ್ಎಂಇ- ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಕ್ಕೆ ನಿರ್ದೇಶಕ, ಡಾ.ಕೆ.ಹರೀಶ್ ಕುಮಾರ್-ಉತ್ತರ ಕನ್ನಡ ಜಿಲ್ಲಾಧಿಕಾರಿ, ಪಾಟೀಲ್ ಯಲಗೌಡ-ಶಿವನಗೌಡ-ವಿಜಯಪುರ ಡಿಸಿ, ಸಿ.ಸತ್ಯಭಾಮ - ಮರಾಜನಗರ ಜಿಲ್ಲಾ ಪಂಚಾಯತ್ ಸಿಇಒ,  ಡಾ.ಕೆ.ಎನ್.ವಿಜಯ್ ಪ್ರಕಾಶ್ - ಹಾಸನ ಜಿಲ್ಲಾ ಪಂಚಾಯತ್ ಸಿಇಒ, ಕೆಎಎಸ್ ಅಧಿಕಾರಿ ಜಹೀರಾ ನಸೀಮಾ - ಕಲಬುರಗಿ ಕೆಇಆರ್ ಟಿಸಿ ನಿರ್ದೇಶಕಿಯಾಗಿ ವರ್ಗಾವಣೆಗೊಂಡಿದ್ದಾರೆ.

ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ, ಚಿಕ್ಕಮಗಳೂರು ಎಸ್ಪಿ ಸೇರಿದಂತೆ ಆರು ಐಪಿಎಸ್‌ ಅಧಿಕಾರಿಗಳನ್ನು ಸಹ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಮೂರು ವರ್ಷಗಳಿಂದ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಹುದ್ದೆಯಲ್ಲಿದ್ದ ಆರ್‌.ಹಿತೇಂದ್ರ ಅವರನ್ನು ವರ್ಗಾವಣೆ ಮಾಡಿ​ರುವ ಸರ್ಕಾರವು, ಆ ಸ್ಥಾನಕ್ಕೆ ಐಜಿಪಿ ಪಿ.ಹರಿಶೇಖರನ್‌ರನ್ನು ನಿಯೋಜಿಸಿದೆ.

ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರು ಬೆಂಗಳೂರು ನಗರ ದಕ್ಷಿಣ ವಿಭಾಗಕ್ಕೆ ಬಂದಿದ್ದು, ಅವರಿಂದ ತೆರವಾದ ಹುದ್ದೆಗೆ ಸಿಐಡಿಯಲ್ಲಿದ್ದ ಪ್ರರ್ತಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಸಹಾಯಕ ತನಿಖಾಧಿಕಾರಿ ಹರೀಶ್‌ ಪಾಂಡೆ ವರ್ಗಾವಣೆಗೊಂಡಿದ್ದಾರೆ. ಸಿಸಿಬಿ ಡಿಸಿಪಿ ಜಿನೇಂದ್ರ ಖಣಗಾವಿ ಅವರಿಗೆ ಚನ್ನಪಟ್ಟಣ ಪೊಲೀಸ್‌ ತರಬೇತಿ ಶಾಲೆ ಪ್ರಾಂಶುಪಾಲ ಹುದ್ದೆ ನೀಡಲಾಗಿದೆ.

ಹಾಸನದಿಂದ ಎತ್ತಂಗಡಿಗೊಂಡಿದ್ದ ರಾಹುಲ್‌ ಕುಮಾರ್‌ ಶಹಾಪುರವಾಡ್‌ ಅವರಿಗೆ ಬೆಂಗಳೂರು ಪೂರ್ವ ವಿಭಾಗದ ಹೊಣೆಗಾರಿಕೆ ಕೊಡಲಾಗಿದೆ. ಆ ಹುದ್ದೆಯಲ್ಲಿದ್ದ ಅಜಯ್‌ ಹಿಲೋರಿ ಕೆಎಸ್‌ಆರ್‌ಪಿ ಕಾಮಾಂಡೆಟ್‌ ಆಗಿ ನೇಮಕಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com