ಅಕ್ರಮ ಆಸ್ತಿ: ಡಿಕೆಶಿ ಅರ್ಜಿ ವಜಾಗೊಳಿಸುವಂತೆ ಹೈಕೋರ್ಟ್ ಗೆ ಇಡಿ, ಐಟಿ ಇಲಾಖೆ ಮನವಿ

ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಾದಐಪಿಸಿ, ಐ-ಟಿ ಆಕ್ಟ್ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿನ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ....
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್
ಬೆಂಗಳೂರು: ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಾದಐಪಿಸಿ, ಐ-ಟಿ ಆಕ್ಟ್ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿನ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ರಾಜ್ಯ ಹೈಕೋರ್ಟ್ ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.ಇದಕ್ಕೆ ಮುನ್ನ ಡಿಕೆಶಿತಮ್ಮ ವಿರುದ್ಧ ಕೇಂದ್ರ ತನಿಖಾ ತಂಡಗಳು ಹೂಡಿರುವ ಕ್ರಿಮಿನಲ್ ಮೊಕದ್ದಮೆಗಳ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಎರಡೂ ಏಜನ್ಸಿಗಳು ಶುಕ್ರವಾರ ಹೈಕೋರ್ಟ್ ನ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಮುಂದೆ ತಮ್ಮ ಆಕ್ಷೇಪಗಳನ್ನು ಸಲ್ಲಿಸಿವೆ. ಈ ವೇಳೆ ಶಿವಕುಮಾರ್ ಪರ ವಕೀಲರಾಗಿದ್ದ ಕಪಿಲ್ ಸಿಬಲ್ ತಮ್ಮ ವಾದಮಂಡನೆಗೆ ಎರಡು ಗಂಟೆಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಮಾರ್ಚ್ 7ಕ್ಕೆ ಮುಂದೂಡಿದೆ.
ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ತಮ್ಮ ಮುಂದೆ ವಿಚಾರಣೆಗೆ ಹಾಜರಾಗಬೇಕೆಂದು ಡಿಕೆಶಿಗೆ ಇತ್ತೀಚೆಗಷ್ಟೇ ಶೋಕಾಸ್ ನೋಟೀಸ್ ಜಾರಿ ಂಆಡಿದೆ. ಐಟಿ ಇಲಾಖೆ ಸಹ ಅಕ್ರಮ ವಿಶೇಷ ತೆರಿಗೆ ವಿನಾಯಿತಿಗೆ ಸಂಬಂಧಿಸಿ ಶಿವಕುಮಾರ್ ಅವರ ವಿಚಾರಣೆಗೆ ಮುಂದಾಗಿತ್ತು.ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವ ಕಾರಣ ಶೋಕಾಸ್ ನೋಟೀಸ್ ಅನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆಕ್ಷೇಪದಲ್ಲಿ ಹೇಳಿದೆ.
ಶಿವಕುಮಾರ್ ಮತ್ತು ಇತರರಿಂದ ತಾನು ವಶಕ್ಕೆ ಪಡೆಯಲಾದ  ಹಣದ ಕುರಿತು ವಾದಿಸಿದ ಐಟಿ ಇಲಾಖೆ ಅವರು ಸರಿಯಾದ ಲೆಕ್ಕಪತ್ರ ಇಟ್ಟಿರಲಿಲ್ಲ,  ಮುಂಗಡ ತೆರಿಗೆ ಪಾವತಿಸಲಿಲ್ಲವೆಂದು ವಾದಿಸಿದೆ.ಅವರು ನಗದು ಹಣದ ಮೂಲವನ್ನು ವಿವರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಐಟಿ ಇಲಾಖೆ ಅವರು ಆದಾಯಕ್ಕೆ ಮಿಗಿಲು ಹಣ ಪಡೆದರೂ ಕಾನೂನಿನ ಹಿಡಿತದಿಂದ ಪಾರಾಗಲು ಯತ್ನಿಸಿದ್ದಾರೆ ಎಂದು ಐಟಿ ಇಲಾಖೆ ವಾದಿಸಿದೆ.ಈ ಎಲ್ಲಾ ಕಾರಣಗಳಿಂದ ಆರೋಪಿ ಶಿವಕುಮಾರ್ ಹಾಗೂ ಇತರರ ಅರ್ಜಿಯನ್ನು ವಜಾಗೊಳಿಸಲು ಐಟಿ ಇಲಾಖೆ ನ್ಯಾಯಾಲಯಕ್ಕೆ ಮೊರೆ ಇಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com