ದಾವಣಗೆರೆ, ಮಲೆನಾಡಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫ್ಲೈ ಬಸ್ ಸಂಚಾರ ಶೀಘ್ರ

ಮಲೆನಾಡು ಹಾಗೂ ಬಿಸಿಲು ನಾಡು ಚಿತ್ರದುರ್ಗದ ಜನತೆಗೆ ಇದೀಗ ಸಂಭ್ರಮಿಸುವ ಸಮಯ! ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿವಮೊಗ್ಗ, ದಾವಣೆಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗಕ್ಕೆ ಬೆಂಗಳೂರು....
ದಾವಣಗೆರೆ, ಮಲೆನಾಡಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫ್ಲೈ ಬಸ್ ಸಂಚಾರ ಶೀಘ್ರ
ದಾವಣಗೆರೆ, ಮಲೆನಾಡಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫ್ಲೈ ಬಸ್ ಸಂಚಾರ ಶೀಘ್ರ
ಚಿತ್ರದುರ್ಗ: ಮಲೆನಾಡು ಹಾಗೂ ಬಿಸಿಲು ನಾಡು ಚಿತ್ರದುರ್ಗದ ಜನತೆಗೆ ಇದೀಗ ಸಂಭ್ರಮಿಸುವ ಸಮಯ! ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿವಮೊಗ್ಗ, ದಾವಣೆಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ನಿಂದ ನೇರ ಬಸ್ ಸೇವೆ- ಫ್ಲೈ ಬಸ್ ಸೇವೆ ಕಲ್ಪಿಸಲು ಮುಂದಾಗಿದೆ. ಇದರೊಡನೆ ದಕ್ಷಿಣ ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂಡ ನೇರ ಸಂಪರ್ಕ ದೊರಕಿದಂತಾಗಲಿದೆ. ಇದಾಗಲೇ ಕೆಐಎ ನಿಂದ ಕುಂದಾಪುರ, ಮಣಿಪಾಲ್, ಮಡಿಕೇರಿ, ಮೈಸೂರುಗಳಿಗೆ ಫ್ಲೈ ಬಸ್ ಸೇವೆ ಚಾಲ್ತಿಯಲ್ಲಿದೆ.
ದಾವಣ್ಗೆರೆ ವಿಭಾಗದ ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಕಸಿದ್ದೇಶ್ವರ ಹೆಬ್ಬಾಳ್ ಪತ್ರಿಕೆಯೊಡನೆ ಮಾತನಾಡಿ "ಸೇವೆಗಳು ಎಂದಿನಿಂದ ಪ್ರಾರಂಭವಾಗಲಿದೆ, ಯಾವ ಸಮಯಕ್ಕೆ ಬಸ್ ಸಂಚಾರ ನಡೆಸಲಿದೆ ಎನ್ನುವ ಸಂಪೂರ್ಣ ಮಾಘಿತಿ ಇನ್ನೂ ಲಭ್ಯವಿಲ್ಲ.ಆದರೆ ವಿಮಾನ ಹಾರಾಟದ ಸಮಯದ ಆಧಾರದ ಮೇಲೆ, ಬಸ್ ಓಡಿಸಲಾಗುವುದು" ಎಂದಿದ್ದಾರೆ.
ಇನ್ನು ದಾವಣಗೆರೆಯಿಂದ ಸಂಚರಿಸುವ ಬಸ್ ಗಳು ಚಿತ್ರದುರ್ಗದಿಂದಲೂ ಪ್ರಯಾಣಿಕರನ್ನು ಕರೆದಿಯ್ಯಲಿದೆ ಎಂದು ಅವರು ವಿವರಿಸಿದ್ದಾರೆ.
"ಶಿವಮೊಗ್ಗ-ಚಿತ್ರದುರ್ಗ ಮಾರ್ಗದಲ್ಲಿ ಫ್ಲೈ  ಬಸ್ ಸೇವೆಗಳು ಕಾರ್ಯಾಚರಣೆಗೊಳ್ಲಲಿದೆ ಎನ್ನುವುದು ಖಚಿತಪಡಿಸಿಕೊಳ್ಲಲು ನಾವು ಶಿವಮೊಗ್ಗ ವಿಭಾಗದ ಅಧಿಕಾರಿಗಳೊಡನೆ ಚರ್ಚೆಯನ್ನು ನಡೆಸುತ್ತೇವೆ, ಚಿತ್ರದುರ್ಗವು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿದೆ. ಉತ್ತಮ ಸಂಪರ್ಕ ಹೊಂದಿರುವ, ಈ ವಿಭಾಗದಲ್ಲಿ ಕೆಐಎ ಗೆ ವ್ಬಸ್ ಸಂಪರ್ಕ ಕಲ್ಪಿಸಿದರೆ ವಿಮಾನಯಾನ ಮಾಡಲುದ್ದೇಶಿಸುವ ಅನೇಕರಿಗೆ ಅನುಕೂಲವಾಗಲಿದೆ".ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com