ಎನ್ಐಆರ್ ಎಫ್ ರ್ಯಾಂಕಿಂಗ್ ಅರ್ಹತೆಗೆ ಕರ್ನಾಟಕದ ಕೇವಲ ಒಂದು ವೈದ್ಯಕೀಯ ಕಾಲೇಜು ಅರ್ಹತೆ!

ರಾಜ್ಯದಲ್ಲಿರುವ 16 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದೇ ಒಂದು ಕಾಲೇಜು ರಾಷ್ಟ್ರೀಯ ...
ಬೆಂಗಳೂರು ವೈದ್ಯಕೀಯ ಕಾಲೇಜು
ಬೆಂಗಳೂರು ವೈದ್ಯಕೀಯ ಕಾಲೇಜು
ಬೆಂಗಳೂರು; ರಾಜ್ಯದಲ್ಲಿರುವ 16 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದೇ ಒಂದು ಕಾಲೇಜು ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟು(ಎನ್ಐಆರ್ ಎಫ್) ಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿದೆ. ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ರಾಜ್ಯದಲ್ಲಿ ಈ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರ್ಯಾಂಕಿಂಗ್ ಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿದೆ.
ರಾಜ್ಯದಲ್ಲಿರುವ ಯಾವುದೇ ಬೇರೆ ವೈದ್ಯಕೀಯ ಕಾಲೇಜುಗಳು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನಿಗದಿಪಡಿಸಿರುವ ಅರ್ಹತೆಯನ್ನು ಹೊಂದಿಲ್ಲ. ಜಿಲ್ಲಾ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ ಗಿರೀಶ್, ಎನ್ ಐಆರ್ ಎಫ್ ನಡಿ ಎಲ್ಲಾ ಕಾಲೇಜುಗಳು ರ್ಯಾಂಕಿಂಗ್ ಗೆ ಅರ್ಜಿ ಸಲ್ಲಿಸಬೇಕು. ಆದರೆ ಕೆಲವು ಕಾಲೇಜುಗಳು ಅರ್ಹತೆಯನ್ನು ಹೊಂದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com