ಯಲಹಂಕ ವಾಯುನೆಲೆ ಬಳಿ ಮತ್ತೊಂದು ಅವಗಢ, ಬಂಡೀಪುರ, ಗೋಪಾಲಸ್ವಾಮಿ ಬೆಟ್ಟದಲ್ಲೂ ಧಗ ಧಗ!

ಯಲಹಂಕದ ವಾಯುನೆಲೆ ಬಳಿ ಫೆ.23 ರಂದು ಅಗ್ನಿ ಅನಾಯುತಕ್ಕೆ ಕಾರುಗಳು ಭಸ್ಮವಾಗಿದ್ದ ಘಟನೆ ನಡೆದಿರುವ ಬೆನ್ನಲ್ಲೇ ಮತ್ತೊಂದು ಅಗ್ನಿ ಅವಗಢ ಸಂಭವಿಸಿದೆ.
ಯಲಹಂಕ ವಾಯುನೆಲೆಯಲ್ಲಿ ಮತ್ತೊಂದು ಅವಗಢ, ಬಂಡೀಪುರ, ಗೋಪಾಲಸ್ವಾಮಿ ಬೆಟ್ಟದಲ್ಲೂ ಧಗ ಧಗ!
ಯಲಹಂಕ ವಾಯುನೆಲೆಯಲ್ಲಿ ಮತ್ತೊಂದು ಅವಗಢ, ಬಂಡೀಪುರ, ಗೋಪಾಲಸ್ವಾಮಿ ಬೆಟ್ಟದಲ್ಲೂ ಧಗ ಧಗ!
ಬೆಂಗಳೂರು: ಯಲಹಂಕದ ವಾಯುನೆಲೆ ಬಳಿ ಫೆ.23 ರಂದು ಅಗ್ನಿ ಅನಾಯುತಕ್ಕೆ ಕಾರುಗಳು ಭಸ್ಮವಾಗಿದ್ದ ಘಟನೆ ನಡೆದಿರುವ ಬೆನ್ನಲ್ಲೇ ಮತ್ತೊಂದು ಅಗ್ನಿ ಅವಗಢ ಸಂಭವಿಸಿದೆ. 
ವಾಯುನೆಲೆಯ ಹಿಂಭಾಗದಲ್ಲೇ ಇರುವ ಜಾರಕಬಂಡೆ ಕಾವಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿ ಉರಿದಿದೆ. ಸುಮಾರು 40 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. 
ಕಿಡಿಗೇಡಿಗಳ ಕೃತ್ಯದಿಂದ ಈ ಅವಗಢ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 
ಇದೇ ವೇಳೆ ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ನಿನ್ನೆ ರಾತ್ರಿಯೇ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿತ್ತಾದರೂ ಮತ್ತೊಮ್ಮೆ ಬಂಡೀಪುರದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 
ಇನ್ನು ಹಿಮವದ್ ಗೋಪಾಲ ಸ್ವಾಮಿ ಬೆಟ್ಟದಲ್ಲಿಯೂ ಬೆಂಕಿ ಕಾಣಿಸಿಕೊಂಡಿದ್ದು 60 ಅಗ್ನಿ ಶಾಮಕ ಮತ್ತು 50 ಕ್ಕೂ ಹೆಚ್ಚು ಸ್ವಯಂ ಸೇವಕರಿಂದ ಅಗ್ನಿ ನಂದಿಸುವ ಕೆಲಸ ನಡೆಯುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com