ವೈದ್ಯಕೀಯ ಪಿಜಿ ಕೋರ್ಸ್ ಗಳ ಶುಲ್ಕದಲ್ಲಿ ಶೇ. 15ರಷ್ಟು ಹೆಚ್ಚಳ!

ಸ್ನಾತಕೋತ್ತರ ಮೆಡಿಕಲ್ ಕೋರ್ಸ್ ಗಳ ಟ್ಯೂಶನ್ ಶುಲ್ಕ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಹೆಚ್ಚಾಗಲಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸ್ನಾತಕೋತ್ತರ ಮೆಡಿಕಲ್ ಕೋರ್ಸ್ ಗಳ ಟ್ಯೂಶನ್ ಶುಲ್ಕ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಹೆಚ್ಚಾಗಲಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈಗಿರುವ ಶುಲ್ಕಕ್ಕಿಂತ ಮೂರು ಪಟ್ಟು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕರ್ನಾಟಕ ವೃತ್ತಿಪರ ಕಾಲೇಜು ಫೌಂಡೇಶನ್ (ಕೆಪಿಸಿಎಫ್) ರಾಜ್ಯ ಸರ್ಕಾರದ ಜೊತೆ ನಿನ್ನೆ ಸಭೆ ನಡೆಸಿದ್ದು ಫೌಂಡೇಶನ್ ಮತ್ತು ಸರ್ಕಾರ ಶೇಕಡಾ 15ರಷ್ಟು ಶುಲ್ಕ ಹೆಚ್ಚಿಸಲು ನಿರ್ಧರಿಸಿದೆ.
ಸರ್ಕಾರಿ ಮೆಡಿಕಲ್ ಕಾಲೇಜುಗಳ ಶುಲ್ಕ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ ಗಿರೀಶ್, ಇದು ಮಾತುಕತೆ ಹಂತದಲ್ಲಿದ್ದು ನಾಳೆ ಅಥವಾ ನಾಡಿದ್ದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮುಂದಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ಮಾರ್ಚ್ ಕೊನೆಗೆ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತಿದ್ದು ಈ ವರ್ಷ ಲೋಕಸಭೆ ಚುನಾವಣೆಯಿರುವುದರಿಂದ ಆ ಸಮಯದಲ್ಲಿ ಯಾವುದೇ ಗೊಂದಲವಾಗಬಾರದೆಂದು ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಶೇಕಡಾ 15ರಷ್ಟು ಶುಲ್ಕ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು.
ವೈದ್ಯಕೀಯ ಸೀಟಿನಲ್ಲಿ ಶೇಕಡಾ 33ರಷ್ಟು ಸರ್ಕಾರದ ಭಾಗವಿದ್ದು ಪ್ರತಿ ವಿದ್ಯಾರ್ಥಿಗೆ ಅದು ನೀಡುವ 60 ಸಾವಿರದಿಂದ 90 ಸಾವಿರದವರೆಗೆ ಸಾಕಾಗುವುದಿಲ್ಲ. ಇಲಾಖೆಯೊಳಗೆ ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರದ ಬಗ್ಗೆ ನಾವು ಸಚಿವರಿಗೆ ವಿವರಿಸಿದ್ದೇವೆ ಎಂದು ಜಯರಾಮ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com