ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ, 20 ಬೈಕ್ ವಶ

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಬೆಂಗಳೂರಿನ ಯಶವಂತಪುರ ...

Published: 03rd January 2019 12:00 PM  |   Last Updated: 03rd January 2019 12:40 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : The New Indian Express
ಬೆಂಗಳೂರು: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಬೆಂಗಳೂರಿನ ಯಶವಂತಪುರ ಪೊಲೀಸರು 20 ಮೋಟಾರ್ ಬೈಕ್ ಗಳು ಹಾಗೂ 25 ಲಕ್ಷ ರು ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಂಧಿತ  ಅಬ್ದುಲ್ ವಹೀದ್ ಮತ್ತು ಅರ್ಬರ್  ಆಂಧ್ರಪ್ರದೇಶದ ಪುಂಗನೂರಿನವರಾಗಿದ್ದಾರೆ,  ನಗರದ ವಿವಿಧ ಭಾಗಗಳಲ್ಲಿ ಹಲವು ಬೈಕ್ ಗಳನ್ನು ಕದ್ದಿದ್ದರು.

ಆರೋಪಿಗಳು ಇಬ್ಬರು ಕಳೆದ 40 ದಿನಗಳಲ್ಲಿ 20 ಕ್ಕೂ ಹೆಚ್ಚು ಬೈಕ್‍ಗಳನ್ನು ಕಳವು ಮಾಡಿದ್ದಾರೆ. ಮೊದಲು ಮೋಜಿಗಾಗಿ ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿಗಳು ನಂತರ ಅದನ್ನೇ ಕೆಲಸವನ್ನಾಗಿ ಮಾಡಲು ಆರಂಭಿಸಿದ್ದರು. ಕೊನೆಗೆ ಬೈಕ್ ಕಳ್ಳತನ ಸಾಕಾಗಿ, ಅದೇ ಬೈಕ್‍ನಲ್ಲಿ ಸರಗಳ್ಳತನಕ್ಕೆ ಇಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp