ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಅನುಷ್ಠಾನಕ್ಕೆ ಸರ್ಕಾರದಿಂದ ಆದೇಶ

ಕನ್ನಡ ಪರ ಸಂಘಟನೆಗಳ ವಿರೋಧದ ನಡುವೆಯೇ ರಾಜ್ಯ ಸರ್ಕಾರ ಮುಂಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನಾ ಮಾದ್ಯಮ ಪರಿಚಯಿಸಲು ಮುಂದಾಗಿದೆ.

Published: 03rd January 2019 12:00 PM  |   Last Updated: 03rd January 2019 01:10 AM   |  A+A-


HD Kumaraswamy

ಎಚ್ ಡಿ ಕುಮಾರಸ್ವಾಮಿ

Posted By : RHN RHN
Source : The New Indian Express
ಬೆಂಗಳೂರು: ಕನ್ನಡ ಪರ ಸಂಘಟನೆಗಳ ವಿರೋಧದ ನಡುವೆಯೇ ರಾಜ್ಯ ಸರ್ಕಾರ ಮುಂಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನಾ ಮಾದ್ಯಮ ಪರಿಚಯಿಸಲು ಮುಂದಾಗಿದೆ. ಮತ್ತೀಗ ಸರ್ಕಾರ ಈ ಕುರಿತಂತೆ ಆದೇಶ ಜಾರಿಗೊಳಿಸಿದೆ.

ಕಳೆದ ಎರಡು ತಿಂಗಳ ಹಿಂದೆಯೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದ್ದರೂ ಇದುವರೆಗೆ ಯಾವೊಂದು ಜಾಲತಾಣದಲ್ಲಾಗಲಿ, ಸರ್ಕಾರಿ ಪೋರ್ಟಲ್ ಗಳಲ್ಲಾಗಲಿ ಪ್ರಕಟಿಸದೆ ರಹಸ್ಯವಾಗಿಡಲಾಗಿತ್ತು.ಅಕ್ಟೋಬರ್ 30, 2018ರ ದಿನಾಂಕದಂದು ಸರ್ಕಾರ ಹೊರಡಿಸಿದ್ದ ಆದೇಶದ ಪ್ರತಿ ಪತ್ರಿಕೆಗೆ ಲಭ್ಯವಾಗಿದೆ.

ಬಜೆಟ್ ಅಧಿವೇಶನದಲ್ಲಿ  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ್ದ ಪ್ರಕಟಣೆಯನ್ನು ಅನುಸರಿಸಿ ಈ ಆದೇಶ ನೀಡಲಾಗಿದೆ.ಯೋಜನೆ ಅನುಷ್ಠಾನಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್ಇಆರ್ಟಿ)  ಜತೆ ಸೇರಿನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕಿದೆ.

ಇದಕ್ಕೆ 14 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದ್ದು ಮೊದಲ ಹಂತದಲ್ಲಿ ಆಯ್ದ 1,000 ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿ ಮಟ್ಟದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಅಳವಡಿಸಬೇಕೆಂದು ಆದೇಶದಲ್ಲಿ ಹೇಳಲಾಗಿದೆ. ಇನ್ನು 2017-18 ಶೈಕ್ಷಣಿಕ ವರ್ಷದಿಂದ ಕಾರ್ಯನಿರ್ವಹಿಸುವ ಎಲ್ಲಾ  ಮಾದರಿ ಶಾಲೆಗಳಲ್ಲಿ ಇಂಗ್ಲಿಷ್ ಮಾದ್ಯಮ ಪ್ರಾರಂಭಿಸುವುದು ಕಡ್ಡಾಯವೆನ್ನಲಾಗಿದೆ.

"ಹೊಸ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಇನ್ನೂ ಯೋಚಿಸಿಲ್ಲ, ಆದರೆ ಸ್ಥಳೀಯ ಆಂಗ್ಲ  ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರುವ ಅನೇಕ ಶಿಕ್ಷಕರಿದ್ದು ಈಗಿರುವ ಶಿಕ್ಷಕರಿಗೆ ಅತ್ಯುತ್ತಮ ತರಬೇತಿ ಒದಗಿಸುವಂತೆ ನಾವು ೂಚನೆ ನೀಡಿದ್ದೇವೆ.ಶಿಕ್ಷಕರಿಗೆ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ" ಎಂದು ಡಿಎಸ್ಇಆರ್ಟಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp