ಬೆಳಗಾವಿ: 'ಬೇಟಿ ಬಚಾವೊ, ಬೇಟಿ ಪಡಾವೊ' ಹೆಸರಲ್ಲಿ ಗ್ರಾಮಸ್ಥರನ್ನು ವಂಚಿಸಿದ ಗ್ಯಾಂಗ್!

ಸರ್ಕಾರಿ ಅಧಿಕಾರಿಗಳ ನೆಪದಲ್ಲಿ ಅಂತಾರಾಜ್ಯ ಶಂಕಿತ ಕಳ್ಳರ ಗ್ಯಾಂಗ್ ವೊಂದು ರಾಜ್ಯಕ್ಕೆ ಆಗಮಿಸಿದ್ದು, ಬೇಟಿ ಬಚಾವೋ, ಬೇಡಿ ಪಡಾವೋ ಅಭಿಯಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಜನರನ್ನು ವಂಚಿಸಲಾಗುತ್ತಿದೆ ಎಂಬಂತಹ ಆರೋಪ ಕೇಳಿಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಸರ್ಕಾರಿ ಅಧಿಕಾರಿಗಳ ನೆಪದಲ್ಲಿ ಅಂತಾರಾಜ್ಯ ಶಂಕಿತ  ಕಳ್ಳರ  ಗ್ಯಾಂಗ್ ವೊಂದು ರಾಜ್ಯಕ್ಕೆ ಆಗಮಿಸಿದ್ದು, ಬೇಟಿ ಬಚಾವೋ, ಬೇಡಿ ಪಡಾವೋ ಅಭಿಯಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಜನರನ್ನು ವಂಚಿಸಲಾಗುತ್ತಿದೆ ಎಂಬಂತಹ ಆರೋಪ ಕೇಳಿಬಂದಿದೆ.

ಹೆಣ್ಣು ಮಗುವಿಗೆ 21 ವರ್ಷ ಪೂರ್ಣಗೊಂಡ ಬಳಿಕ  2 ಲಕ್ಷ ಕೊಡಿಸುವುದಾಗಿ ಹೇಳುತ್ತಾ ಈ ಗುಂಪು ಜನರಿಗೆ ನಕಲಿ ಫಾರಂವೊಂದನ್ನು ನೀಡಿ ಅದನ್ನು ಭರ್ತಿ ಮಾಡುವಂತೆ ಹೇಳುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಹಿಂದೆ ಇಂತಹ ವಂಚಕರನ್ನು ಹರಿಯಾಣದಲ್ಲಿ ಪತ್ತೆ ಹಚ್ಚಲಾಗಿತ್ತು. ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ  ಸಂಗ್ರಹಿಸುವ ಸಲುವಾಗಿ ಕೇಂದ್ರ ಸಚಿವಾಲಯ ಮನೆ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸುವಂತೆ ಕಳುಹಿಸಿದೆ ಎಂದು ಹೇಳಿ ಜನರನ್ನು ನಂಬಿಸುತ್ತಿದ್ದ ಈ ಗ್ಯಾಂಗ್  ಹೆಣ್ಣು ಮಗು ಹೊಂದಿರುವ ಪೋಷಕರಿಂದ ಅರ್ಜಿ ಭರ್ತಿ ಮಾಡಿಸಿಕೊಳ್ಳುತಿತ್ತು. ಬ್ಯಾಂಕ್ ನಂಬರ್ , ಆಧಾರ್ ನಂಬರ್ ಮತ್ತಿತರ ವಿಶ್ವಾಸಾರ್ಹ ಮಾಹಿತಿಯನ್ನು ಕಲೆ ಹಾಕಲಾಗುತಿತ್ತು ಎನ್ನಲಾಗಿದೆ.

ಈ ಯೋಜನೆಯಡಿ ಸೌಲಭ್ಯ ಪಡೆಯಲು 0-31 ವರ್ಷದೊಳಗಿನ ಹೆಣ್ಣುಮಕ್ಕಳು ಅರ್ಹರು ಎಂದು ಈ ಗ್ಯಾಂಗ್ ಜನರನ್ನು ನಂಬಿಸುತ್ತದೆ. ಆದರೆ. ವಾಸ್ತವವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಯಡಿ ಹೆಸರುನೋಂದಾಯಿಸಿಕೊಳ್ಳಬಹುದು. ಬಳಿಕ  21 ವರ್ಷ ತುಂಬಿದಾಗ ಅಂತಹ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಹಣ ದೊರೆಯುತ್ತದೆ.

ಫಾರಂ ಭರ್ತಿ ಮಾಡಿದರೆ ಅದನ್ನು ಸಚಿವಾಲಯಕ್ಕೆ ಕಳುಹಿಸಬೇಕೆಂಬ ಪ್ರಕ್ರಿಯೆ  ಕೂಡಾ ಈ ಯೋಜನೆಯಡಿ ಬರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com