ಕಾರ್ಕಳದಲ್ಲಿ ಗೋಹತ್ಯೆ: 5 ಜನರ ಬಂಧನ

ನಿಟ್ಟೆ ಗ್ರಾಮದ ಅರ್ಬಿ ಜಲಪಾತದ ಬಳಿ ಗೋಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಐವರು ಆರೋಪಿಗಳನ್ನು ಕಾರ್ಕಳ ಗ್ರಾಮೀಣ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಉಡುಪಿ: ನಿಟ್ಟೆ ಗ್ರಾಮದ ಅರ್ಬಿ ಜಲಪಾತದ ಬಳಿ ಗೋಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಐವರು ಆರೋಪಿಗಳನ್ನು ಕಾರ್ಕಳ ಗ್ರಾಮೀಣ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 
ಬಂಧಿತರನ್ನು ಸೋಮನಾಥ್ (33), ಶಂಕರ್ (28), ಪ್ರಶಾಂತ್ (28), ಪ್ರಸನ್ನ (21), ಮುಹಮ್ಮದ್ ಅಶ್ರಫ್ (38) ಎಂದು ಗುರ್ತಿಸಲಾಗಿದೆ. 
ಅರ್ಜಿ ಜಲಪಾತದ ಬಳಿ ಗೋವನ್ನು ಹತ್ಯೆ ಮಾಡಿರುವ ವಿಚಾರ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸ್ಥಳೀಯ ಜನರಿಗೆ ಹಂಚುವ ಸಲುವಾಗಿ ಗೋವನ್ನು ಹತ್ಯೆ ಮಾಡಿದ್ದೆವೆಂದು ಆರೋಪಿಗಳು ಹೇಳಿದ್ದಾರೆಂದು ಎಸ್ಐ ನಝೀರ್ ಹುಸೇನ್ ಅವರು ಹೇಳಿದ್ದಾರೆ. 
ದಾಳಿ ನಡೆಸಿದ ಸ್ಥಳದಲ್ಲಿ ಪೊಲೀಸರು ಹಲವಾರು ಗೋವುಗಲು ತಲೆಗಳು, ಬಾಲ, ಹಸಿ ಚರ್ಮ, ಎರಡು ಚಾಕುಗಳು, ಪ್ಲಾಸ್ಟಿಕ್ ವಸ್ತುಗಳು, ಹಗ್ಗ ಹಾಗೂ 55 ಕೆಜಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. 
ಗೋ ಹತ್ಯೆ ಕುರಿತು ಮಾಹಿತಿ ತಿಳಿದ ಕೂಡಲೇ ಸ್ಥಳದ ಮೇಲೆ ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ದಾಳಿ ನಡೆಸಲಾಗಿತ್ತು. ಈ ವೇಳೆ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಯಿತು. ಮತ್ತೊಬ್ಬ ಆರೋಪಿ ಸುರೇಶ್ ಎಂಬಾತ ತಪ್ಪಿಸಿಕೊಂಡಿದ್ದಾನೆಂದು ಹುಸೇನ್ ಅವರು ಹೇಳಿದ್ದಾರೆ. 
ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಅರಣ್ಯ ಪ್ರದೇಶದಲ್ಲಿ ಮೇಯಲು ಬರುತ್ತಿದ್ದ ಹಸುಗಳನ್ನು ಹಿಡಿದುಕೊಂಡು ಸ್ಥಳೀಯರ ಜನರಿಗೆ ಮಾಂಸವನ್ನು ಪೂರೈಸುತ್ತಿದ್ದೆವು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com