ಕೈಕಾಲು ಕತ್ತರಿಸುತ್ತೇನೆ: ಅರಣ್ಯಾಧಿಕಾರಿಗೆ ಕಾಂಗ್ರೆಸ್ ಶಾಸಕ ಬೆದರಿಕೆ, ವಿಡಿಯೋ ವೈರಲ್

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕಾರಣ ದೇವಸ್ಥಾನ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರಣ್ಯಾಧಿಕಾರಿಯೊಬ್ಬರಿಗೆ ಕಾಂಗ್ರೆಸ್ ಶಾಸಕರೊಬ್ಬರು ಕೈಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿರುವ ವಿಡಿಯೋವೊಂದು...

Published: 06th January 2019 12:00 PM  |   Last Updated: 06th January 2019 02:03 AM   |  A+A-


I will chop off legs and hands: Congress MLA BK Sangameshwara threatens forest officer

ಕೈಕಾಲು ಕತ್ತರಿಸುತ್ತೇನೆ: ಅರಣ್ಯ ಅಧಿಕಾರಿಗೆ ಕಾಂಗ್ರೆಸ್ ಶಾಸಕ ಬೆದರಿಕೆ, ವಿಡಿಯೋ ವೈರಲ್

Posted By : MVN MVN
Source : ANI
ಭದ್ರಾವತಿ: ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕಾರಣ ದೇವಸ್ಥಾನ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರಣ್ಯಾಧಿಕಾರಿಯೊಬ್ಬರಿಗೆ ಕಾಂಗ್ರೆಸ್ ಶಾಸಕರೊಬ್ಬರು ಕೈಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾದ ದೇವಸ್ಥಾನಕ್ಕೆ ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದಾರೆ. ಇದರಂತೆ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ವರದಿಗಳು ತಿಳಿಸಿವೆ. 

ದೇವಸ್ಥಾನ ನಿರ್ಮಾಣಕ್ಕೆ ವಿರೋಧಿಸಿದರೆ, ಅರಣ್ಯಾಧಿಕಾರಿ ದಿನೇಶ್ ಅವರ ಕೈಕಾಲು ಕತ್ತರಿಸುತ್ತೇನೆಂದು ಫೋನ್ ನಲ್ಲಿ ಶಾಸಕ ಅವಾಜ್ ಹಾಕಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಗ್ರಾಮಸ್ಥರ ಎದುರೇ ಅಧಿಕಾರಿಗೆ ಶಾಸಕ ಅವಾಜ್ ಹಾಕಿರುವ ವಿಡಿಯೋ ಬಗ್ಗೆ ಇದೀಗ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ, ಈ ಬಗ್ಗೆ ಅರಣ್ಯಾಧಿಕಾರಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. 
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp