ಚಿತ್ರಪ್ರೇಮಿಗಳೇ, ಕುಮಾರ ಕೃಪಾ ರಸ್ತೆಯಲ್ಲಿ ನಡೆಯುತ್ತಿದೆ ಚಿತ್ರಸಂತೆ, ಭೇಟಿ ನೀಡಿ

ನಗರದ ಕುಮಾರಕೃಪಾ ರಸ್ತೆಯಲ್ಲಿ ಬಣ್ಣಬಣ್ಣದ ಚಿತ್ತಾರಗಳ ಕಲರವ. ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಸಂತೆ ....
ಚಿತ್ರಸಂತೆ ಉದ್ಘಾಟನೆ ವೇಳೆ ಗಣ್ಯರು
ಚಿತ್ರಸಂತೆ ಉದ್ಘಾಟನೆ ವೇಳೆ ಗಣ್ಯರು

ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯಲ್ಲಿ ಬಣ್ಣಬಣ್ಣದ ಚಿತ್ತಾರಗಳ ಕಲರವ. ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಸಂತೆ ನಡೆಯುತ್ತಿದ್ದು ಸಾವಿರಾರು ಮಂದಿ ಕಲಾಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ.

ಈ ವರ್ಷದ ಚಿತ್ರಸಂತೆಯ ಘೋಷವಾಕ್ಯ 'ಗಾಂಧಿ 150' ಎಂಬುದಾಗಿದೆ. ದೇಶದ ನಾನಾ ಭಾಗಗಳಿಂದ ಬಂದ 2600 ಅರ್ಜಿಗಳಲ್ಲಿ 1500 ಅರ್ಜಿಗಳನ್ನು 16 ರಾಜ್ಯಗಳಿಂದ ಆರಿಸಿದ್ದು ಈ ಕಲಾವಿದರು ಭಾಗವಹಿಸಿದ್ದಾರೆ. ಕಳೆದ ವರ್ಷದ ಚಿತ್ರಸಂತೆ ಉತ್ಸವದಲ್ಲಿ ಸುಮಾರು 4 ಲಕ್ಷ ಮಂದಿ ವೀಕ್ಷಕರು ಭಾಗವಹಿಸಿ ಸುಮಾರು 2 ಕೋಟಿ ರೂಪಾಯಿ ವಹಿವಾಟು ನಡೆದಿತ್ತು. ಈ ವರ್ಷ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಚಿತ್ರಸಂತೆ ನಿನ್ನೆ ಉದ್ಘಾಟನೆಗೊಂಡಿದ್ದು ಮಹಾತ್ಮಾ ಗಾಂಧಿ ಮತ್ತು ಹಿಟ್ಲರ್ ನಡುವೆ ಸಂಭಾಷಣೆಯ ರವಿ ರೇಖಾ ಅವರ ಚಿತ್ರ ನೋಡುಗರ ಮನೆಸೂರೆಗೊಂಡಿತ್ತು. ಗಾಂಧಿಯವರು ನೂಲಿನ ಚರಕದ ಮೇಲೆ ಓಡುತ್ತಿರುವ ಬಾಲಾಜಿ ಮರ್ಗೊಂದ ಅವರ ಚಿತ್ರ ಕೂಡ ಎಲ್ಲರ ಮನೆಸೂರೆಗೊಂಡಿತ್ತು.

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ನಟ ರಮೇಶ್ ಅರವಿಂದ್ ಮೊದಲಾದವರು ಹಾಜರಿದ್ದರು. ಚಿತ್ರಕಲಾ ಸಮ್ಮಾನ್-2019ನ್ನು ಕಲಾವಿದರಾದ ಜೆಎಸ್ಎಮ್ ಮಣಿ, ಜೇಸು ರಾವಲ್ ಮತ್ತು ನೀಲ ಪಂಚ್ ಅವರಿಗೆ ನೀಡಲಾಯಿತು.

ಚಿತ್ರಕಲಾ ಪರಿಷತ್ ಆವರಣದಲ್ಲಿ ಬಿದಿರಿನಿಂದ ನಿರ್ಮಿಸಲಾಗಿರುವ ಗಾಂಧಿ ಕುಟೀರ ಇಂದು ಉದ್ಘಾಟನೆಗೊಂಡಿತು. ಗಾಂಧೀಜಿಯವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಕುಮಾರಕೃಪಾ ಅತಿಥಿ ಗೃಹದಲ್ಲಿ ಮತ್ತು ಚಿತ್ರಕಲಾ ಪರಿಷತ್ ಇರುವ ಸ್ಥಳದಲ್ಲಿ ನೆಲೆಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com