ಕನ್ನಡ-ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆ; ಮೈತ್ರಿಪಕ್ಷಗಳ ಮಧ್ಯೆ ಮತ್ತೆ ಭಿನ್ನಮತ

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ...

Published: 07th January 2019 12:00 PM  |   Last Updated: 07th January 2019 11:42 AM   |  A+A-


H D Kumaraswamy and Siddaramaiah(File photo)

ಹೆಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ(ಸಂಗ್ರಹ ಚಿತ್ರ)

Posted By : SUD
Source : The New Indian Express
ಧಾರವಾಡ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಪ್ರಸ್ತಾವನೆಗೆ ಮೈತ್ರಿಕೂಟದಲ್ಲಿ ತೀವ್ರ ಹಿನ್ನಡೆಯುಂಟಾಗಿದ್ದು ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಮುಂದುವರಿಸುವ ಕುರಿತು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿ ಮಾತನಾಡುವುದಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೆ. ಧಾರವಾಡದಲ್ಲಿ ನಿನ್ನೆ ತೆರೆಕಂಡ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 7ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕೆಂದು ಸಿದ್ದರಾಮಯ್ಯ ಬಲವಾಗಿ ಹೇಳಿದ್ದಾರೆ.

ಇಂಗ್ಲಿಷ್ ಕೇವಲ ಒಂದು ಭಾಷೆ ಮಾತ್ರ. ಅದು ಜ್ಞಾನ ಗಳಿಕೆಗೆ ಮಾಧ್ಯಮವಲ್ಲ. ಜ್ಞಾನವನ್ನು ಮಕ್ಕಳು ಪಡೆಯುವುದು ಮಾತೃಭಾಷೆ ಮೂಲಕ ಎಂದು ಹೇಳಿದ ಸಿದ್ದರಾಮಯ್ಯ, ಉನ್ನತ ಶಿಕ್ಷಣದಲ್ಲಿ ಆಂಗ್ಲಮಾಧ್ಯಮ ಸಹಾಯವಾಗುತ್ತದೆ ಎಂಬುದು ಕೇವಲ ನಿಮಿತ್ತ ಮಾತ್ರ ಎಂದರು.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 9 ವರ್ಷದ ಬಾಲಕ ಇದುವರೆಗಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಹೆಸರು ಹೇಳಿ ಪ್ರೇಕ್ಷಕರನ್ನು ಬೆರಗುಗೊಳಿಸಿದ ಘಟನೆ ನಡೆಯಿತು. ಅಷ್ಟೇ ಅಲ್ಲದೆ ಈ ಬಾಲಕನಿಗೆ ಕರ್ನಾಟಕದ ಹಲವು ತಾಲ್ಲೂಕುಗಳು ಮತ್ತು ಗ್ರಾಮಗಳ ಹೆಸರುಗಳು ಕೂಡ ಗೊತ್ತಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ರೊಡಲ್ಗೊಂಡ ಶಿಬಿರದಲ್ಲಿ ನೆಲೆಸಿರುವ ನಿಖಿಲ್ ವಿಶ್ವನಾಥ್ ಈ ಬಾಲಕನಾಗಿದ್ದು ಈಗಾಗಲೇ 4 ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾನೆ. ಆತ ಓದಿದ್ದನ್ನು ನೆನಪಿನಲ್ಲಿಡುವ ಶಕ್ತಿ ಮಗನಿಗಿದೆ ಎಂದು ಬಾಲಕನ ತಂದೆ ವಿಶ್ವನಾಥ್ ಹೇಳುತ್ತಾರೆ.
Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp