ಸದ್ಯದಲ್ಲೇ, ಬಿಎಂಟಿಸಿ ಪ್ರಯಾಣಿಕರಿಗೂ ಇ-ಟಿಕೆಟ್!

ಬಿಎಂಟಿಸಿ ಪ್ರಯಾಣಿಕರು ಪ್ರಯಾಣದ ವೇಳೆಯಲ್ಲಿ ತಮ್ಮ ಸ್ಮಾರ್ಟ್ ಪೋನ್ ಗಳ ಮೂಲಕ ಟಿ- ಟಿಕೆಟ್ ಖರೀದಿಸಬಹುದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಬಿಎಂಟಿಸಿ ಪ್ರಯಾಣಿಕರು ಬಸ್ಸು ಕಂಡಕ್ಟರ್ ಜೊತೆಗೆ ಚಿಲ್ಲರೆ ವಿಷಯವಾಗಿ ವಾಗ್ವಾದ ನಡೆಯುವುದಕ್ಕೆ ಶೀಘ್ರದಲ್ಲಿಯೇ ಬ್ರೇಕ್ ಬೀಳಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರಯಾಣಿಕರು ಪ್ರಯಾಣದ ವೇಳೆಯಲ್ಲಿ ತಮ್ಮ ಸ್ಮಾರ್ಟ್ ಪೋನ್ ಗಳ ಮೂಲಕ ಟಿ- ಟಿಕೆಟ್ ಖರೀದಿಸಬಹುದಾಗಿದೆ.

ಸದ್ಯ ಬೆಂಗಳೂರು ನಗರದಲ್ಲಿ 6, 630 ಬಸ್ಸುಗಳು ಪ್ರತಿದಿನ 70 ಸಾವಿರ  ಟ್ರಿಪ್ ಗಳಲ್ಲಿ 11.57 ಲಕ್ಷ ಕಿಲೋ ಮೀಟರ್ ದೂರ ಸಂಚರಿಸುತ್ತವೆ. ಕಳೆದ ಮೂರು ವರ್ಷಗಳಿಂದಲೂ ಏಜೆನ್ಸಿಯೊಂದು  ಬಿಎಂಟಿಸಿಗೆ  ಇವಿಎಂ ಪೂರೈಸುತ್ತಿದ್ದು, ಇದರಿಂದ  ಟಿಕೆಟ್ ಹಾಗೂ ಪಾಸ್ ಗಳ ಮೌಲ್ಯವನ್ನು ಇದರಿಂದ ತಿಳಿಯಬಹುದಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ  ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್. ವಿ. ಪ್ರಸಾದ್, ಆನ್ ಲೈನ್ ಟಿಕೆಟಿಂಗ್ ವ್ಯವಸ್ಥೆ ಪರಿಚಯಿಸುವ ಪ್ರಸ್ತಾವವಿದೆ. ಮೊಬೈಲ್ ಅಪ್ಲಿಕೇಷನ್ ಮೂಲಕವೇ ಪ್ರಯಾಣಿಕರು ಟಿಕೆಟ್ ಪಡೆಯಬಹುದಾಗಿದೆ.
ಅಸ್ತಿತ್ವದಲ್ಲಿರುವ ಮೊಬೈಲ್ ಅಪ್ಲಿಕೇಶನ್ ನ್ನು  ಇವಿಎಂಗಳ ಜೊತೆಗೆ ನವೀಕರಿಸಬೇಕು. ಇವಿಎಂ ನವೀಕರಿಸುವಂತೆ ಏಜೆನ್ಸಿಗೆ ಹೇಳಲಾಗಿದೆ. ಈ ಯಂತ್ರ ಬಳಸುವ ಮೂಲಕ ಗ್ರಾಹಕರ ಕ್ಯೂರ್ ಸಂಖ್ಯೆಯನ್ನು ಕಂಡಕ್ಟರ್  ಓದಬಹುದು. ಆದಾಗ್ಯೂ, ಇದು ಕೆಲ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com