ಬಾಗಲಕೋಟೆ: ಆಸ್ತಿ ಆಸೆಗೆ ತಂದೆಯನ್ನೇ ಕೊಡಲಿಯಿಂದ ಹೊಡೆದು ಕೊಂದ ಪಾಪಿ ಪುತ್ರ!

ಆಸ್ತಿ ಆಸೆಯಿಂದ ಮಗನೊಬ್ಬ ತನ್ನನ್ನು ಹುಟ್ಟಿಸಿದ ತಂದೆಯನ್ನೇ ಕೊಡಲಿ ಬೀಸಿ ಅಮಾನುಷವಾಗಿ ಕೊಂದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಾಗಲಕೋಟೆ: ಆಸ್ತಿ ಆಸೆಯಿಂದ ಮಗನೊಬ್ಬ ತನ್ನನ್ನು ಹುಟ್ಟಿಸಿದ ತಂದೆಯನ್ನೇ ಕೊಡಲಿ ಬೀಸಿ ಅಮಾನುಷವಾಗಿ ಕೊಂದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದ ಹೊರವಲಯದಲ್ಲಿ ನಡೆದಿರುವ ಈ ಘಟನೆಯಲ್ಲಿ ಮಲ್ಲಿಕಾರ್ಜುನ (65) ಹತ್ಯೆಯಾಗಿದ್ದಾನೆ. ಈತನ ಮೊದಲ ಮಗ ಶರಣಪ್ಪನೇ ಇವನನ್ನು ಹತ್ಯೆ ಮಾಡಿದ್ದು ಹತ್ಯೆ ಬಳಿಕ ಪೋಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. 

ಘಟನೆ ವಿವರ
ಮೃತ ಮಲ್ಲಿಕಾರ್ಜುನನಿಗೆ ಇಬ್ಬರು ಮಕ್ಕಳಿದ್ದು ಶರಣಪ್ಪ ಮೊದಲಿನಿಂದಲೂ ಕೆಟ್ಟ ಹವ್ಯಾಸಗಳಿಂದ ದಾರಿ ತಪ್ಪಿದ ಮಗನಾಗಿದ್ದ. ಇದೇ ವೇಳೆ ಎರಡನೇ ಮಗ ಸರಿಯಾದ ದಾರಿಯಲ್ಲಿ ಬದುಕು ಸಾಗಿಸುತ್ತಿದ್ದ. ಆದರೆ ಆರೋಪಿ ಶರಣಪ್ಪ ತನಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಬೇಕೆಂದು ಯಾವಾಗಲೂ ತಂದೆಯೊಡನೆ ಜಗಳವಾಡುತ್ತಿದ್ದ. ಒಮ್ಮೆ ಮಲ್ಲಿಕಾರ್ಜುನ ಪುತ್ರನ ಮಾತುಗಳಿಂದ ಬೇಸತ್ತು ತನ್ನ ಹೆಅರಲ್ಲಿದ್ದ 12 ಎಕರೆ ತೋಟದಲ್ಲಿ 4 ಎಕರೆ ತೋಟವನ್ನು ಶರಣಪ್ಪನಿಗೆ ಬರೆದುಕೊಟ್ಟಿದ್ದ. ಆದರೆ ಇದರಿಂದ ಸುಮ್ಮನಾಗದ ಆತ ಉಳಿದ 8 ಎಕರೆ ದಾಳಿಂಬೆ ತೋಟವನ್ನೂ ತನಗೇ ನೀಡಬೇಕೆಂದು ಹಠ ಹಿಡಿದಿದ್ದಾನೆ.

ಈ ವೇಳೆ ತನ್ನ ಪುತ್ರನನ್ನು ಹೇಗಾದರೂ ಸರಿದಾರಿಗೆ ತರಬೇಕೆನ್ನುವ ಪ್ರಯತ್ನದಲ್ಲಿ ತಂದೆ ಮಲ್ಲಿಕಾರ್ಜುನ ತನ್ನ ತೋಟವನ್ನು ತಾನು ಬೇರೊಬ್ಬರಿಗೆ ಭೋಗ್ಯಕ್ಕೆ ನೀಡಿ ನಾನೇ ಅಲ್ಲಿ ಕೆಲಸದವನಾಗಿದ್ದೇನೆ ಎಂದು ಮಗನನ್ನು ನಂಬಿಸಿ ಅವನನ್ನು ತನ್ನೊಂದಿಗೆ ಕೆಲಸ ಮಾಡ್ಕೊಂಡಿರಲು ಹೇಳಿದ. ಆದರೆ ಪುತ್ರ ಶರಣಪ್ಪ ಮಾತ್ರ ತನಗೆ ತೋಟ ಬೇಕೇ ಬೇಕೆನ್ನುವ ಹಠ ಬಿಡಲಿಲ್ಲ. ಈ ವಿಚಾರವಾಗಿ ತಂದೆ ಮಕ್ಕಳ ನಡುವೆ ಮನಸ್ತಾಪವಾಗಿ ಮೂರು ತಿಂಗಳ ಹಿಂದೆ ಮಾತು ಬಿಟ್ಟಿದ್ದರು.

ಆದರೆ ಶರಣಪ್ಪ ಮಾತ್ರ ತನ್ನ ಆಸ್ತಿ ಪಡೆಯುವ ಆಸೆಯನ್ನು ಬಿಟ್ಟಿರಲಿಲ್ಲ. ಕಡೆಗೆ ಮೊನ್ನೆ ಜನವರಿ 3 ರಂದು ಮತ್ತೆ ತಂದೆಯೊಡನೆ ಆಸ್ತಿ ವಿಚಾರವಾಗಿ ಜಗಳ ಕಾದಿದ್ದಾನೆ. ಇಬ್ಬರ ಮಾತುಗಳೂ ವಿಕೋಪಕೆ ತಿರುಗಿದ್ದು ಶರಣಪ್ಪ ಸಮೀಪದಲ್ಲಿದ್ದ 5 ಕೆಜಿ ಗ್ಯಾಸ್ ಸಿಲೆಂಡರ್ ಎತ್ತಿ ವೃದ್ದ ತಂದೆಯ ತಲೆಗೆ ಬಲವಾಗಿ ಹೊಡೆಇದ್ದಾನೆ. ಅಲ್ಲದೆ ಕೊಡಲಿಯಿಂದ ತಲೆಗೆ ಚಚ್ಚಿ ಅವನನ್ನು ಹತ್ಯೆ ಮಾಡಿದ್ದಾನೆ.

ಆ ಬಳಿಕ ಶರಣಪ್ಪ ತನ್ನ ಮೊಬೈ;ಲ್ ನಿಂದ ಜೋರಾಗಿ ಇನ್ನೊಬ್ಬನೊಡನೆ ಮಾತನಾಡುವುಉದನ್ನು ಕೇಳಿದ ನೆರೆಹೊರೆಯವರು ಅನುಮಾನಗೊಂಡು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕಾಗಮಿಸಿದ ಬಾದಾಮಿ ಪ್ಟ್ಟಣ ಪೋಲೀಸರು ಮನೆ ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕು ಕಂಡಿದೆ.

ಆದರೆ ಅಷ್ಟರಲ್ಲೇ ಆರೋಪಿ ಶರಣಪ್ಪ ತಾನು ಕೃತ್ಯವೆಸಗಿ ಕಣ್ಮರೆಯಾಗಿದ್ದಾನೆ. ಪೋಲೀಸರು ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com