ಹೆಬ್ಬಾಳ ಮೂಲಕ ವಿಮಾನ ನಿಲ್ದಾಣಕ್ಕೆ ಮೆಟ್ರೊ ಮಾರ್ಗಕ್ಕೆ ಸಚಿವ ಸಂಪುಟ ಒಪ್ಪಿಗೆ

ಇನ್ನು ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೇಗನೆ ತಲುಪಬಹುದು. ಹೆಬ್ಬಾಳ ಜಂಕ್ಷನ್ ನಿಂದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇನ್ನು ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೇಗನೆ ತಲುಪಬಹುದು. ಹೆಬ್ಬಾಳ ಜಂಕ್ಷನ್ ನಿಂದ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೊ ಮಾರ್ಗದ ಮರುಜೋಡಣೆ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಹೆಚ್ಚುವರಿ 9 ಕಿಲೋ ಮೀಟರ್ ಮಾರ್ಗದ ಜೋಡಣೆಗೆ ಸುಮಾರು 10, 584 ಕೋಟಿ ರೂಪಾಯಿ ಬೇಕಾಗಬಹುದು. ಸಚಿವ ಸಂಪುಟದ ಒಪ್ಪಿಗೆಯಿಂದ ನಾಗವಾರದಿಂದ ವಿಮಾನ ನಿಲ್ದಾಣದವರೆಗೆ ಮೆಟ್ರೊ ಮಾರ್ಗವನ್ನು ಹೆಬ್ಬಾಳ ಮೂಲಕ 38 ಕಿಲೋ ಮೀಟರ್ ಪುನರಾವರ್ತಿಸಲಾಗುತ್ತದೆ ಎಂದು ಸಹಕಾರ ಖಾತೆ ಸಚಿವ ಬಂಡೆಪ್ಪ ಕಾಶಂಪುರ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಳೆದ ವರ್ಷ ಮೊದಲ ಸಂಪುಟ ಸಭೆಯಲ್ಲಿ ಮೆಟ್ರೊ ಸಂಬಂಧಿಸಿದ ಮೂರು ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದರು.ಚಳ್ಳಘಟ್ಟದಲ್ಲಿ ಹೆಚ್ಚುವರಿ ನಿಲ್ದಾಣ ಸ್ಥಾಪನೆಗೆ ಸಹ ಸಂಪುಟ ಒಪ್ಪಿಗೆ ನೀಡಿತು. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ ಆರ್ ಪುರಂ ಜಂಕ್ಷನ್ ವರೆಗೆ ಮೆಟ್ರೊ ಎರಡನೇ ಹಂತದ ಕಾಮಗಾರಿಗೆ ನಿಧಿಯನ್ನು ಮರು ಪರಾಮರ್ಶಿಸಿದ್ದು ಹೊಸ ವೆಚ್ಚದ ದರ 5,994 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಸ್ಟೀಲ್ ಮೇಲ್ಸೇತುವೆ ವಿಷಯದಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿಯಿಲ್ಲ:
ಸ್ಟೀಲ್ ಮೇಲ್ಸೇತುವೆ ನಿರ್ಮಾಣ ಮರುಪರಿಶೀಲನೆಯಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿಯಿಲ್ಲ. ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಮಾತ್ರ ನನಗೆ ಮುಖ್ಯವಾಗಿದೆ. ನನ್ನ ಮೇಲೆ ಯಾರೂ ಪ್ರಭಾವ ಬೀರಿಲ್ಲ. ಅದರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಜನರ ದೃಷ್ಟಿಯಿಂದ ವಿಶ್ಲೇಷಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com