ಕೊಪ್ಪಳ: ಇಲ್ಲಿ ಪೋಲೀಸ್ ತರಬೇತಿ ಬಟ್ಟೆ ಒಗೆಯುವುದರಿಂದ ಪ್ರಾರಂಭ!

ಆರ್ಡರ್ಲಿ ಪದ್ದತಿ ರದ್ದು ಮಾಡಿ ಕರ್ನಾಟಕ ರಾಜ್ಯ ಗೃಹ ಇಲಾಖೆ ಆದೇಶಿಸಿದ್ದರೂ ರಾಜ್ಯದ ಹಲವೆಡೆ ಇಂದಿಗೂ ಈ ಹಳೆ ಪದ್ದತಿ ಜೀವಂತವಾಗಿದೆ.ಕೊಪ್ಪಳ ತಾಲೂಕು ಹೊಸಹಳ್ಳಿ ವ್ಯಾಪ್ತಿಯಲ್ಲಿ.....
ಕೊಪ್ಪಳ: ಇಲ್ಲಿ ಪೋಲೀಸ್ ತರಬೇತಿಯು ಲಾಂಡ್ರಿಯಿಂದ ಪ್ರಾರಂಭವಾಗುತ್ತದೆ!
ಕೊಪ್ಪಳ: ಇಲ್ಲಿ ಪೋಲೀಸ್ ತರಬೇತಿಯು ಲಾಂಡ್ರಿಯಿಂದ ಪ್ರಾರಂಭವಾಗುತ್ತದೆ!
ಕೊಪ್ಪಳ: ಆರ್ಡರ್ಲಿ ಪದ್ದತಿ ರದ್ದು ಮಾಡಿ ಕರ್ನಾಟಕ ರಾಜ್ಯ ಗೃಹ ಇಲಾಖೆ ಆದೇಶಿಸಿದ್ದರೂ ರಾಜ್ಯದ ಹಲವೆಡೆ ಇಂದಿಗೂ ಈ ಹಳೆ ಪದ್ದತಿ ಜೀವಂತವಾಗಿದೆ.ಕೊಪ್ಪಳ ತಾಲೂಕು ಹೊಸಹಳ್ಳಿ ವ್ಯಾಪ್ತಿಯಲ್ಲಿ ಬರುವ ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ನಲ್ಲಿ ಹಿರಿಯ ಅಧಿಕಾರಿಗಳು ತರಬೇತಿನಿರತ ಪೋಲೀಸ್ ಪೇದೆಗಳನ್ನು ಮನೆಗೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ.
ಈ ಸಂಬಂಧದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಪೇದೆಗಳಿಂದ ಬಟ್ಟೆ ತೊಳೆಸಿಕೊಳ್ಳುವುದು, ಶೇವಿಂಗ್ ಮಾಡಿಸಿಕೊಳ್ಳುವುದು ಸೇರಿ ಅನೇಕ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪ ಏಳಿ ಬಂದಿದೆ.
ಇಲ್ಲಿನ ಹೆಡ್ ಕಾನ್ಸ್ಟೇಬಲ್ ಹನುಮಂತಪ್ಪ ಎನ್ನುವವರು ಕೆಳ ಹಂತದ ಪೋಲೀಸ್ ಅಧಿಕಾರಿಗಳಿಂದ ತಮ್ಮ ಬಟ್ಟೆ ತೊಳೆಸಿಕೊಂಡಿರುವುದು ತಿಳಿದುಬಂದಿದೆ.
ರೂಢಿಗಳ ಪ್ರಕಾರ, ಧೋಬಿಗಳು ಮತ್ತು ಕ್ಷೌರಿಕರು ಈ ಕಾರ್ಯಗಳನ್ನು ಮಾಡಬೇಕು. ಆದರೆ ಇಲ್ಲಿ ತರಬೇತಿ ಪಡೆಯುತ್ತಿರುವ ಹೊಸ ಪೋಲೀಸರಿಂದ ಇಂತಹಾ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ.ಅವರು ಇಲ್ಲಿ ತಮ್ಮ ಹಿರಿಯ ಅಧಿಕಾರಿಗಳ ಒಳೌಡುಪು ಸೇರಿ ಬಟ್ಟೆಗಳನ್ನು ತೊಳೆಯಬೇಕ್ಲು, ಅವರಿಗೆ ಕ್ಷೌರ ಮಾಡಿಸಬೇಕು.
ಇನ್ನು ಹೆಡ್ ಕಾನ್ಸ್ಟೇಬಲ್ ಜತೆಗೆ ತರಬೇತಿ ಶಾಲೆಯ ಮುಖ್ಯ ಡ್ರಿಲ್ ಅಧಿಕಾರಿ (ಸಿಡಿಓ) ಸಹ ತರಬೇತಿ ಪಡೆಯುವ ಪೋಲೀಸರಿಗೆ ಕಿರುಕುಯ್ಳ ನಿಡುತ್ತಿದ್ದಾರೆ ಎಂದು ಮೂಲಗಳು ಹೇಳಿದೆ. "ಅಧಿಕಾರಿಗಳು ತಮ್ಮ ಮನೆಗೆಲಸಗಳನ್ನು ನಮ್ಮಿಂದ ಮಾಡಿಸಿಕೊಳ್ಳುತ್ತಿದ್ದಾರೆ, ನಾವು ಈ ಬಗ್ಗೆ ದೂರು ನೀಡಲು ಹೋದರೆ ನಮಗೆ ಬೆದರಿಕೆ ಹಾಕುತ್ತಾರೆ, ಅವರು ನಮ್ಮಿಂದ ಬಟ್ಟೆ ಒಗೆಸಿಕೊಳ್ಳುತ್ತಾರೆ, ಮುಖಕ್ಷೌರ ಮಾಡಿಸಿಕೊಳ್ಳುತ್ತಾರೆ" ಅಲ್ಲಿನ ತರಬೇತಿನ್ನಿರತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅಲ್ಲಿನ ಹಿರಿಯ ಅಧಿಕಾರಿಗಳು ಹೊಸ ತರಬೇತಿದಾರರು ತಮ್ಮ ತರಬೇತಿಯ ಭಾಗವಾಗಿರದ ಕೆಲಸವನ್ನು ನಿರಾಕರಿಸಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com