ಸಂಚಾರ ದಟ್ಟಣೆ ಕಂಡು ಕೆಲಹೊತ್ತು ಸ್ವತಃ ಟ್ರಾಫಿಕ್ ಪೊಲೀಸ್ ಆದ ಸಚಿವ ಯು ಟಿ ಖಾದರ್; ವಿಡಿಯೊ ವೈರಲ್

ಪಂಪ್ ವೆಲ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಜಿಲ್ಲಾ ....
ಪಂಪ್ ವೆಲ್ ವೃತ್ತದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಸಚಿವ ಯು ಟಿ ಖಾದರ್
ಪಂಪ್ ವೆಲ್ ವೃತ್ತದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಸಚಿವ ಯು ಟಿ ಖಾದರ್

ಮಂಗಳೂರು: ಪಂಪ್ ವೆಲ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಸ್ವತಃ ತಾವೇ ಸಂಚಾರಿ ಪೊಲೀಸ್ ಆದ ಘಟನೆ ನಡೆಯಿತು. ನಿನ್ನೆ ಅಪರಾಹ್ನ ಹೆದ್ದಾರಿ ಸಮೀಪ ನಿಂತು ವಾಹನ ಸಂಚರಿಸಲು ಅನುವು ಮಾಡಿಕೊಡುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ವಾಹನ ಹೋಗಲು ಸಚಿವ ಖಾದರ್ ಸಹಾಯ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತಾವು ರಾಷ್ಟ್ರೀಯ ಹೆದ್ದಾರಿಯಲ್ಲಿ ಕನಿಷ್ಠ 10 ನಿಮಿಷಗಳ ಕಾಲ ಸಿಕ್ಕಿಹಾಕಿಕೊಂಡೆ. ನಂತರ ಸ್ವತಃ ಕಾರಿನಿಂದಿಳಿದು ವಾಹನ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟೆ. ಈ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ ಎಂದು ಸಚಿವ ಯು ಟಿ ಖಾದರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಿದ್ದರೆ ಅದನ್ನು ಸರಿಯಾಗಿ ಮುಚ್ಚಬೇಕಾಗಿತ್ತು, ಜನರನ್ನು ದಾರಿತಪ್ಪಿಸುವ ರೀತಿ ಮಾಡಬಾರದು ಎಂದು ಕೂಡ ಸಚಿವ ಖಾದರ್ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com