ಲಿಂಗಾಯತ ಧರ್ಮ ಹೋರಾಟಕ್ಕೆ ಲಂಚದ ಹಣ ಹೇಳಿಕೆ: ಶಾಮನೂರು-ಪಾಟೀಲ್ ಜಗಳ ತಾರಕಕ್ಕೆ

ಲಿಂಗಾಯತ ಧರ್ಮ ಹೋರಾಟಕ್ಕೆ ಲಂಚದ ಹಣ ಬಳಕೆಯಾಗಿದೆ ಎಂದ್ಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಗೃಹ ಸಚಿವ ಎಂಬಿ ಪಾಟೀಲ್ ಕಿಡಿಕಾರಿದ್ದಾರೆ.
ಶಾಮನೂರು ಶಿವಶಂಕರಪ್ಪ ಮತ್ತು ಎಂಬಿ ಪಾಟೀಲ್
ಶಾಮನೂರು ಶಿವಶಂಕರಪ್ಪ ಮತ್ತು ಎಂಬಿ ಪಾಟೀಲ್
ಹುಬ್ಬಳ್ಳಿ: ಲಿಂಗಾಯತ ಧರ್ಮ ಹೋರಾಟಕ್ಕೆ ಲಂಚದ ಹಣ ಬಳಕೆಯಾಗಿದೆ ಎಂದ್ಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಗೃಹ ಸಚಿವ ಎಂಬಿ ಪಾಟೀಲ್ ಕಿಡಿಕಾರಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪಾಟೀಲ್ "ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಒಂದು ಸಮುದಾಯದ ಅಸ್ಮಿತೆಯ ಹೋರಾಟವಾಗಿದೆ.ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇಂತಹಾ ಹೇಳಿಕೆಯಿಂದ ಶಾಮನೂರು ಅವರ ವ್ಯಕ್ತಿತ್ವದ ಪ್ರದರ್ಶನವಾಗುತ್ತಿದೆ" ಎಂದರು.
ಮಾಜಿ ಸಚಿವರಾದ ಶಾಮನೂರು ತನ್ನ ತಂದೆ ಇದ್ದಂತೆ ಎಂದ ಪಾಟೀಲ್"ನಾನು ಯಾರಿಗೆ ಅಂಜುವುದಿಲ್ಲ. ನನಗೆ ಎಲ್ಲಾ ಗೊತ್ತು. ಶಾಮನೂರು ಶಿವಶಂಕರಪ್ಪ ಅವರಿಗೆ ವೀರಶೈವ ರತ್ನ ಪ್ರಶಸ್ತಿ ಕೊಟ್ಟಿದ್ದಾರೆ ನಾನು ಅವರಿಗೆ ಅಭಿನಂದಿಸುತ್ತೇನೆ. ಆದರೆ ಅವರು ಅವರ ಕುಟುಂಬದ ಬಗ್ಗೆ ಮಾತ್ರ ಮಾತನಾಡ್ತಾರೆ, ಅವರು ಸ್ವಾರ್ಥಿಗಳು. ಅವರು ಮೊದಲು ತಾವು ಯಾರಿಗೇನು ಮಾಡಿದ್ದೇವೆಂದು ತೋರಿಸಲಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತ ಧರ್ಮಕ್ಕಾಗಿ ನಮ್ಮ ಮುಂದಿರುವುದು ಈಗ ಕಾನೂನು ಹೋರಾಟ ಮಾತ್ರ. ಆದರೆ ಕೆಲ ಶಕ್ತಿಗಳು ಇದನ್ನು ವಿರೋಧಿಸುತ್ತಿದೆ. ಏನೇ ಆದರೂ ಮುಂದಿನ ಚುನಾವಣೆ ಬಳಿಕ ನಮಗೆ ಇನ್ನಷ್ಟು ಬೆಂಬಲ ಸಿಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com