ಬೆಂಗಳೂರಿನಿಂದ ಬೆಳಗಾವಿ ಮತ್ತು ಹುಬ್ಬಳ್ಳಿಗೆ ಸ್ಟಾರ್ ಏರ್ ವಿಮಾನ ಹಾರಾಟ

ಉಡಾನ್ -3 ಯೋಜನೆಯಡಿ ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನ ಹಾರಾಟ ...
ಸ್ಟಾರ್ ಏರ್
ಸ್ಟಾರ್ ಏರ್

ಬೆಳಗಾವಿ: ಉಡಾನ್ -3 ಯೋಜನೆಯಡಿ ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನ ಹಾರಾಟ ವಿಳಂಬವಾಗುತ್ತಿರುವುದರ ಮಧ್ಯೆ ಸ್ಟಾರ್ ಏರ್ ಫೆಬ್ರವರಿ 5ರಿಂದ ಬೆಂಗಳೂರು-ಬೆಳಗಾವಿ ಮಧ್ಯೆ ವಿಮಾನ ಹಾರಾಟ ನಡೆಸಲು ನಿರ್ಧರಿಸಿದೆ.

ಈ ಸಂಬಂಧ ಸ್ಟಾರ್ ಏರ್ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಮಂಗಳವಾರ ಹೊರತುಪಡಿಸಿ ಬೇರೆಲ್ಲಾ ದಿನ ವಿಮಾನ ಬೆಂಗಳೂರಿನಿಂದ 1.25ಕ್ಕೆ ಮಧ್ಯಾಹ್ನ ಹೊರಟು ಬೆಳಗಾವಿಗೆ ಮಧ್ಯಾಹ್ನ 2.30ಕ್ಕೆ ತಲುಪಲಿದೆ. ನಂತರ ಅಪರಾಹ್ನ 3 ಗಂಟೆಗೆ ಬೆಳಗಾವಿಯಿಂದ ಹೊರಟು ಬೆಂಗಳೂರಿನಲ್ಲಿ ಅಪರಾಹ್ನ 4.05ಕ್ಕೆ ಬಂದಿಳಿಯಲಿದೆ.

ಮಂಗಳವಾರ ವಿಮಾನ ಬೆಂಗಳೂರಿನಿಂದ ಸಂಜೆ 4.30ಕ್ಕೆ ಹೊರಟು ಬೆಳಗಾವಿಗೆ 5.35ಕ್ಕೆ ತಲುಪಿ ಬೆಳಗಾವಿಯಿಂದ ಸಂಜೆ 6 ಗಂಟೆಗೆ ಹೊರಟು ಬೆಂಗಳೂರಿಗೆ 7.05ಕ್ಕೆ ತಲುಪಲಿದೆ. ಪ್ರಸ್ತುತ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಳಗಾವಿಯಿಂದ ಪ್ರತಿದಿನ ವಿಮಾನ ಹಾರಾಟ ಸೌಲಭ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com