ಕಲ್ಲಡ್ಕ ಪ್ರಭಾಕರ್ ಭಟ್ ಹತ್ಯೆಗೆ ಸಂಚು: ಕೇರಳದ ಕುಖ್ಯಾತ ಡಾನ್ ಬಂಧನ

ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಕೆಲ ಹಿಂದುಪರ ಸಂಘಟನೆಗಳ ಮುಖಂಡರ ಹತ್ಯೆಗೆ...

Published: 14th January 2019 12:00 PM  |   Last Updated: 14th January 2019 06:42 AM   |  A+A-


Delhi Police arrest main accused over conspiracy to kill Prabhakar Bhat

ಪ್ರಭಾಕರ್ ಭಟ್

Posted By : LSB LSB
Source : Online Desk
ಮಂಗಳೂರು: ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಕೆಲ ಹಿಂದುಪರ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಶಂಕೆಯ ಮೇಲೆ ಕೇರಳದ ಕಾಸರಗೋಡಿನ ಕುಖ್ಯಾತ ಡಾನ್ ಒಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಕಾಸರಗೋಡಿನಲ್ಲಿ ದಾಳಿ ನಡೆಸಿದ್ದ ದೆಹಲಿ ಪೊಲೀಸರು ಕುಖ್ಯಾತ ಡಾನ್ ಮುಹತಾಸಿಂ ಅಲಿಯಾಸ್ ತಾಸಿಂ ಯಾನೆಯನ್ನು ಬಂಧಿಸಿದ್ದಾರೆ. 

ತಾಸಿಂ ಯಾನೆ ಪ್ರಭಾಕರ್ ಭಟ್ ಹಾಗೂ ಭಜರಂಗ ದಳದ ಮುಖಂಡ ಶರಣ್ ಪಂಪ್ ವೆಲ್ ಹಾಗೂ ವಿಶ್ವ ಹಿಂದೂ ಪರಿಷತ್ ಜಗದೀಶ್ ಶೇಣುವ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಇತ್ತೀಚಿಗಷ್ಟೇ ಕರಾವಳಿಯ ಕೆಲ ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಭಾಕರ ಭಟ್ ಅವರ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. 
Stay up to date on all the latest ರಾಜ್ಯ news
Poll
DJ-Halli-Violence12

ಹಿಂಸಾಚಾರದಲ್ಲಿ ತೊಡಗಿ ಆಸ್ತಿಪಾಸ್ತಿಗೆ ಹಾನಿ ಮಾಡುವ ಗಲಭೆಕೋರರಿಂದಲೇ ನಷ್ಟದ ಹಣ ವಸೂಲಿ ಮಾಡುವುದರಿಂದ ಗುಂಪು ಗಲಭೆ ತಡೆಯಬಹುದೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp