ಬೆಂಗಳೂರು-ಊಟಿ ಪ್ರಯಾಣಕ್ಕೆ ಕೆಎಸ್ ಆರ್ ಟಿಸಿಯಿಂದ ಪರ್ಯಾಯ ಮಾರ್ಗದ ಪ್ರಸ್ತಾವನೆ

ಸಂಚಾರ ಅವಧಿ ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ಊಟಿ ಪ್ರಯಾಣಕ್ಕೆ ಪರ್ಯಾಯ ಮಾರ್ಗದ ಪ್ರಸ್ತಾವನೆ ...
ಕೆಎಸ್ ಆರ್ ಟಿಸಿ ಬಸ್ (ಸಂಗ್ರಹ ಚಿತ್ರ)
ಕೆಎಸ್ ಆರ್ ಟಿಸಿ ಬಸ್ (ಸಂಗ್ರಹ ಚಿತ್ರ)
ಬೆಂಗಳೂರು: ಸಂಚಾರ ಅವಧಿ ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ಊಟಿ ಪ್ರಯಾಣಕ್ಕೆ ಪರ್ಯಾಯ ಮಾರ್ಗದ ಪ್ರಸ್ತಾವನೆ ಮುಂದಿಟ್ಟಿದೆ.
ತಮಿಳುನಾಡು ಮತ್ತು ಕೆಎಸ್ ಆರ್ ಟಿಸಿ ಅಂತರರಾಜ್ಯ ಒಪ್ಪಂದದಂತೆ ಮುಂದಿನ ಫೆಬ್ರವರಿಯಲ್ಲಿ ಕರಾರಿದೆ ಸಹಿ ಮಾಡುವ ಸಾಧ್ಯತೆಯಿದೆ. 
ಸದ್ಯ ಬೆಂಗಳೂರಿನಿಂದ ಊಟಿಗೆ 14 ಬಸ್ ಗಳು ಸಂಚರಿಸುತ್ತಿವೆ, ತಮಿಳುನಾಡಿನಿಂದ 7 ಹಾಗೂ ಕರ್ನಾಟಕದಿಂದ 7 ಬಸ್ ಗಳು ಸಂಚರಿಸುತ್ತಿವೆ.  ಬೆಂಗಳೂರು- ಮೈಸೂರು-ನಂಜನಗೂಡು-ಗುಂಡ್ಲುಪೇಟೆ- ಬಂಡಿಪುರ- ಮತ್ತು ಗುಡ್ಲೂರು ಮೇಲೆ ಸಂಚರಿಸುತ್ತಿದೆ, ಇದರಿಂದಾಗಿ 8 ಗಂಟೆ 30 ನಿಮಿಷ ಪ್ರಯಾಣದ ಅವಧಿ ಆಗುತ್ತದೆ, ಜೊತೆಗೆ ಕೇವಲ ಎರಡು ಬಸ್ ಗಳ ರಾತ್ರಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ, ಇದರಿಂದ ಹೆಚ್ಚಿನ ಸಮಯ ಹಾಗೂ ಘಾಟ್ ಸೆಕ್ಷನ್ ನಲ್ಲಿ ಪ್ರಯಾಣ ಮಾಡಬೇಕಿರುಪವುದರಿಂದ ಇಂಧನ ಸಹ ಹೆಚ್ಚು ಖರ್ಚಾಗುತ್ತದೆ.
ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ವಾರಾಂತ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಇದರಿಂದ ಕೂಡ ಸಮಯ ವ್ಯರ್ಥ..ಹೀಗಾಗಿ ಬೆಂಗಳೂರು- ಕೃಷ್ಣಗಿರಿ- ಅಂತಿಯೂರು-ಸತ್ಯಮಂಗಲ-ಮೆಟ್ಟುಪಾಳ್ಯ-ಉದಕಮಂಡಲ ರಸ್ತೆಯಲ್ಲಿ ಸಂಚರಿಸಿದರೇ 7 ಗಂಟೆಗಳಲ್ಲಿ ಪ್ರಯಾಣ ಮುಗಿಯುತ್ತದೆ. ಬೆಂಗಳೂರಿನಿಂದ ಊಟಿ 360 ಕಿಮೀ ದೂರವಿದೆ ಎಂದು ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಕ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.
ಟೋಲ್ ರಸ್ತೆಗಳಿರುವುದರಿಂದ ವೇಗವಾಗಿ ಬಸ್ ಸಂಚರಿಸುವುದರಿಂದ ಕೇವಲ 7 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಊಟಿ ತಲುಪಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com